ಹಿಂದಿ ತೆಲುಗು ಹಾಗೂ ಕನ್ನಡ ಸೇರಿದಂತೆ ಸುಮಾರು 12 ಭಾಷೆಯ ಚಿತ್ರರಂಗದಲ್ಲಿ ಜನಪ್ರಿಯ ಗಾಯಕರಿಗೆ ಗುರುತಿಸಿಕೊಂಡಿರುವ ಅರ್ಮಾನ್ ಮಲಿಕ್ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
2007ರಲ್ಲಿ ತೆರೆಕಂಡ ಅಮೀರ್ ಖಾನ್ ನಟನೆಯ ‘ತಾರೆ ಜಮೀನ್ ಪರ್’ ಚಿತ್ರದ “ಬಮ್ ಬಮ್ ಭೋಲೆ” ಹಾಡಿಗೆ ಧ್ವನಿ ಯಾಗುವ ಮೂಲಕ ಗಾಯನ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಸಾಲು ಸಾಲು ಹಿಂದಿ ಸಿನಿಮಾಗಳಲ್ಲಿ ಹಾಡುವ ಮೂಲಕ ಬಾಲಿವುಡ್ ನ ಖ್ಯಾತ ಯುವ ಗಾಯಕರಾಗಿ ಹೊರಹೊಮ್ಮಿದರು.
2015ರಲ್ಲಿ ತೆರೆಕಂಡ ನಟ ವಿನಯ್ ರಾಜಕುಮಾರ್ ಅಭಿನಯದ ‘ಸಿದ್ದಾರ್ಥ’ ಚಿತ್ರದಲ್ಲಿ ”ಫ್ರೀ ಇದೆ” ಎಂಬ ಹಾಡಿಗೆ ಧ್ವನಿಯಾಗುವ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದರು. ಬಳಿಕ ‘ಮುಂಗಾರು ಮಳೆ2’ ಸೇರಿದಂತೆ ‘ಹೆಬ್ಬುಲಿ’ ‘ಚಕ್ರವರ್ತಿ’ ‘ತಾರಕ್’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಕಂಠ ದಾನ ಮಾಡುವ ಮೂಲಕ ಸೂಪರ್ ಡೂಪರ್ ಹಿಟ್ ಹಾಡುಗಳನ್ನು ನೀಡಿದರು. ಹಿಂದಿ ಭಾಷೆಯಲ್ಲೇ ನೂರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿರುವ ಇವರು ಎಲ್ಲಾ ಭಾಷೆಯಲ್ಲಿ ಒಟ್ಟಾರೆ 250ಕ್ಕೂ ಹೆಚ್ಚು ಹಾಡುಗಳನ್ನಾಡಿದ್ದಾರೆ.