ಸ್ಪೋರ್ಟ್ಸ್ ನಲ್ಲಿರುವ ಆಟಗಾರರು ಶ್ರೀಮಂತರಾಗಿರ್ತಾರೆ ಎನ್ನುವುದು ಸುಳ್ಳು. ಕೆಲ ಆಟಗಾರರು ಕೋಟ್ಯಾಧಿಪತಿಗಳಾಗಿದ್ದರೆ ಮತ್ತೆ ಕೆಲ ಆಟಗಾರರ ಕೈನಲ್ಲಿ ಬಿಡಿಗಾಸಿರುವುದಿಲ್ಲ. ಹಾಗಾಗಿ ಹೊಟ್ಟೆ ತುಂಬಿಸಿಕೊಳ್ಳಲು ಅವರು ಯಾವುದೇ ಕೆಲಸ ಮಾಡಲು ಸಿದ್ಧರಿರ್ತಾರೆ. ಇದಕ್ಕೆ ರೊಮೇನಿಯಾದ ಲೀ ಲೆಕ್ಸಿಸ್ ಉತ್ತಮ ನಿದರ್ಶನ.
ರೊಮೇನಿಯಾದ ಲೀ ಲೆಕ್ಸಿಸ್ ಇಂದು ಪ್ರಸಿದ್ಧ ಪೋರ್ನ್ ಸ್ಟಾರ್. ಆದರೆ ಲೀ ದೇಶದ ಅತ್ಯುತ್ತಮ ಜಿಮ್ನಾಸ್ಟ್ ಆಟಗಾರರಲ್ಲಿ ಒಬ್ಬರಾಗಿದ್ದರು. ಲಿಯಾ ಅನೇಕ ಬಾರಿ ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ. ಲೀ ಪ್ರತಿಭಾವಂತ ಆಟಗಾರ್ತಿ. ಆದ್ರೆ ಸಣ್ಣ ಗಾಯ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ.
ಲೀ ಲೆಕ್ಸಿಸ್ ಕೇವಲ 14 ನೇ ವಯಸ್ಸಿನಲ್ಲಿ 5 ಬಾರಿ ರಾಷ್ಟ್ರೀಯ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದರು. ಲಿಗೆ ಸ್ನಾಯು ಸಮಸ್ಯೆ ಕಾಡಿತ್ತು. ಆ ನಂತ್ರ ಕ್ರೀಡೆಯಿಂದ ಹೊರ ಬಂದರು. ಆದ್ರೆ ಗಾಯದಿಂದ ಚೇತರಿಸಿಕೊಂಡ ನಂತ್ರವೂ ಲಿ ವಾಪಸ್ ಆಗಲಿಲ್ಲ. ಪೋರ್ನ್ ಕ್ಷೇತ್ರದಲ್ಲಿ ಗುರುತಿಸಿಕೊಂಡರು.
ಕ್ರೀಡೆ ಬಿಟ್ಟು ಪೋರ್ನ್ ಕ್ಷೇತ್ರಕ್ಕೆ ಕಾಲಿಟ್ಟ ಮೊದಲ ಮಹಿಳೆ ಲೀಯಲ್ಲ. ಇನ್ನೂ ಅನೇಕ ಆಟಗಾರ್ತಿಯರು ಪೋರ್ನ್ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ.