ಟಿಕ್‌ಟಾಕ್ ವ್ಯಸನವೆಂಬುದು ಯಾರನ್ನೂ ಬಿಡುವಂತೆ ಕಾಣುತ್ತಿಲ್ಲ. ಆಸ್ಟ್ರೇಲಿಯಾದ ಸರ್ಜನ್ ಒಬ್ಬರು ಈ ವಿಡಿಯೋ ಶೇರಿಂಗ್ ಅಪ್ಲಿಕೇಶನ್‌ನ ವ್ಯಸನಿಯಾಗಿ ತಮ್ಮ ವೃತ್ತಿ ಬದುಕಿಗೇ ಕುತ್ತು ತಂದುಕೊಂಡಿದ್ದಾರೆ.
ಡಾಕ್ಟರ್ ಡೇನಿಯಲ್ ಆರೊನೊವ್ ಎಂಬ ಈ ಸರ್ಜನ್‌ಗೆ ಟಿಕ್‌ಟಾಕ್‌ನಲ್ಲಿ 13 ದಶಲಕ್ಷ ಅನುಯಾಯಿಗಳಿದ್ದಾರೆ. ಶಸ್ತ್ರಚಿಕಿತ್ಸೆಯ ಕ್ರಿಯೆಗಳನ್ನು ನಡೆಸುವ ನಡುವೆಯೇ ವಿಡಿಯೋ ಫಿಲ್ಮಿಂಗ್ ಮಾಡುತ್ತಾರೆ ಎಂಬ ಆರೋಪವನ್ನು ಡೇನಿಯಲ್ ಬಹಳಷ್ಟು ರೋಗಿಗಳಿಂದ ಕೇಳಿದ್ದಾರೆ.
ಈ ಕಾರಣಕ್ಕಾಗಿ ಡೇನಿಯಲ್ ರನ್ನು ಆಸ್ಟ್ರೇಲಿಯಾದ ಆರೋಗ್ಯ ಸಿಬ್ಬಂದಿ ನಿಯಂತ್ರಣ ಸಂಸ್ಥೆ (ಎಎಚ್‌ಪಿಆರ್‌ಎ) ಯಾವುದೇ ರೀತಿಯ ಸರ್ಜರಿ ಮಾಡದಂತೆ ನಿಷೇಧ ಹೇರಿದೆ.
ಹಬ್ಬಕ್ಕೂ ಮುನ್ನವೇ ದೀಪ ಬೆಳಗಿಸಿದ್ದಕ್ಕೆ 75,000 ರೂ. ದಂಡ..!
ಟಿಕ್‌ಟಾಕ್ ವಿಡಿಯೋಗಳನ್ನು ಮಾಡುವ ಹುಚ್ಚಾಟದ ಕಾರಣ ಶಸ್ತ್ರಚಿಕಿತ್ಸೆಯ ನಡುವೆಯೇ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂಬ ಗಂಭೀರ ಆಪಾದನೆಗಳು ಡೇನಿಯಲ್ ಮೇಲೆ ಕೇಳಿ ಬಂದಿವೆ. ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಗಳನ್ನು ಮಾಡುವ ವಿಡಿಯೋಗಳನ್ನು ಹಂಚಿಕೊಂಡಿರುವ ಡೇನಿಯಲ್, ಪ್ಲಾಸ್ಟಿಕ್ ಸರ್ಜರಿಯಂಥ ಅನೇಕ ವಿಷಯಗಳ ಬಗ್ಗೆಯೂ ವಿವರಿಸಿ ತಿಳಿಸಿದ್ದಾರೆ.
ಆದರೆ ಡೇನಿಯಲ್‌ರ ಈ ಹುಚ್ಚು ಹೆಚ್ಚು ದಿನ ಉಳಿಯಲಿಲ್ಲ. ಜಾಕಿ ಹೆಸರಿನ ಮಹಿಳೆಯೊಬ್ಬರು ತಮ್ಮ ಮುಖಕ್ಕೆ ಫೇಸ್‌ಲಿಫ್ಟ್ ಮಾಡಿಸಲು ಡೇನಿಯಲ್ ಬಳಿ ತೆರಳಿದಾಗ ಆಕೆ ಈತನ ಟಿಕ್‌ಟಾಕ್ ಹುಚ್ಚಿನಿಂದ ಭಾರೀ ಕಿರಿಕಿರಿಯಾಗಿ ವಿಷಯವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.
“ಸರ್ಜರಿಯ ನಡುವೆಯೇ ಪ್ರಕ್ರಿಯೆಯನ್ನು ನಿಲ್ಲಿಸುವ ಆತ, ವಿಡಿಯೋ ಪರಿಶೀಲಿಸಿಕೊಂಡು, ನನಗೆ ಅದು ಬೇಡ ಕಟ್ ಮಾಡಿ, ಇದನ್ನು ಮತ್ತೊಮ್ಮೆ ಮಾಡಿ ಎಂದೆಲ್ಲಾ ಹೇಳಿಕೊಂಡು ಇರುತ್ತಾರೆ,” ಎಂದು ದೂರಿದ್ದಾರೆ.