1987ರಲ್ಲಿ ‘ಮಿಳಿಯಿತಲಿಲ್ ಕಣ್ಣೀರುಮಯಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಮಲಯಾಳಂ ನಿರ್ದೇಶಕ ಪ್ರಕಾಶ್ ಕೋಲೇರಿ (65) ಅವರು ಕೇರಳದ ವಯನಾಡ್ ಜಿಲ್ಲೆಯ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವರದಿಗಳ ಪ್ರಕಾರ, ಕೋಲೇರಿ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಮತ್ತು ಎರಡು ದಿನಗಳಿಂದ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಸಂಬಂಧಿಕರು, ಸ್ಥಳೀಯರು ಮನೆಯ ಬಾಗಿಲು ಒಡೆದು ನೋಡಿದಾಗ ಅವರ ಶವ ಪತ್ತೆಯಾಗಿದೆ. ಇದು ಕೊಲೆಯೋ-ಆತ್ಮಹತ್ಯೆಯೋ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.
ಕೋಲೇರಿ ತಿರುವನಂತಪುರಂನ ಸದರ್ನ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ನಟನೆಯನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿದ ನಿರ್ದೇಶಕರು ಮೊದಲ ನಿರ್ದೇಶನದ ಮಿಳಿಯಿತಲಿಲ್ ಕಣ್ಣೀರುಮಯಿ ಚಿತ್ರದ ಮೂಲಕ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದರು. 1993 ರ ಚಿತ್ರ ಅವನ್ ಅನಂತಪದ್ಮನಾಭನ್ ಅವರ ಅತ್ಯಂತ ಪ್ರಸಿದ್ಧ ಸಿನಿಮವಾಗಿದೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್, ಸುಧಾ ಚಂದ್ರನ್, ಎಂ.ಜಿ.ಸೋಮನ್, ಮಾಥು, ರಾಜನ್ ಪಿ.ದೇವ್, ಟಿ.ಜಿ.ರವಿ ಮುಂತಾದವರು ನಟಿಸಿದ್ದರು.