
ಸ್ಮೃತಿ ಮಂದಾನ 2013ರಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡವಣ ಟಿ ಟ್ವೆಂಟಿ ಪಂದ್ಯದ ಮೂಲಕ ಕ್ರಿಕೆಟ್ ಲೋಕಕ್ಕೆ ಪಾದರ್ಪಣೆ ಮಾಡಿದರು. ಏಕದಿನ ಕ್ರಿಕೆಟ್ ನಲ್ಲಿ 86 ಪಂದ್ಯಗಳನ್ನಾಡಿರುವ ಇವರು 3585 ರನ್ ದಾಖಲಿಸಿದ್ದಾರೆ. ಇದರಲ್ಲಿ 27 ಅರ್ಧ ಶತಕ ಹಾಗೂ ಏಳು ಶತಕಗಳಿವೆ. ಇನ್ನು ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ 136 ಪಂದ್ಯಗಳನ್ನು ಆಡಿದ್ದು 3104 ರನ್ ಸಿಡಿಸಿದ್ದಾರೆ. 24 ಅರ್ಧಶತಕಗಳಿವೆ.
ಸ್ಮೃತಿ ಮಂದಾನ ಭಾರತ ತಂಡದ ಪ್ರಮುಖ ಆಟಗಾರ್ತಿಯಾಗಿದ್ದು, ಕಷ್ಟದ ಸಮಯದಲ್ಲೂ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ವುಮೆನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಆರ್ಸಿಬಿ ತಂಡದ ನಾಯಕಿಯಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಇದೇ ವರ್ಷ ನಡೆದ wpl ನಲ್ಲಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಹೊಸ ದಾಖಲೆ ಬರೆದಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಆಟಗಾರ್ತಿಯರು ಸೇರಿದಂತೆ ಪುರುಷ ಕ್ರಿಕೆಟಿಗರು ಸ್ಮೃತಿ ಮಂದಾನ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.