
ಭಾರತದ ಕ್ರಿಕೆಟ್ ತಂಡದ ಹಿರಿಯ ಆಲ್ರೌಂಡರ್ ಕಪಿಲ್ ದೇವ್ ಇಂದು ತಮ್ಮ 65ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1978 ಅಕ್ಟೋಬರ್ ಒಂದರಂದು ನಡೆದ ಭಾರತ ಹಾಗು ಪಾಕಿಸ್ತಾನ ನಡುವಣ ಏಕದಿನ ಪಂದ್ಯದ ಮೂಲಕ ಕ್ರಿಕೆಟ್ ಲೋಕಕ್ಕೆ ಪಾದರ್ಪಣೆ ಮಾಡಿದ ಕಪಿಲ್ ದೇವ್ ಏಕದಿನ ಕ್ರಿಕೆಟ್ ನಲ್ಲಿ ಸುಮಾರು 225 ಪಂದ್ಯಗಳನ್ನಾಡಿದ್ದು, 3783, ರನ್ ಗಳಿಸಿದ್ದಾರೆ ಹಾಗೂ 253 ವಿಕೆಟ್ ಕಬಳಿಸಿದ್ದಾರೆ ಅದೇ ರೀತಿ ಟೆಸ್ಟ್ ಕ್ರಿಕೆಟ್ ನಲ್ಲಿ 5248 ರನ್ ಮತ್ತು 434 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದರು.
1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವ ಕಪ್ ಗೆಲ್ಲುವ ಮೂಲಕ ಇತಿಹಾಸ ಬರೆದಿತ್ತು. ಈ ಮೂಲಕ ಭಾರತ ತಂಡಕ್ಕೆ ವಿಶ್ವ ಕಪ್ ತಂದುಕೊಟ್ಟ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಹಿರಿಯ ಹಾಗೂ ಯುವ ಕ್ರಿಕೆಟಿಗರು ಕಪಿಲ್ ದೇವ್ ಅವರಿಗೆ ಇಂದು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.