ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ನಟಿ ಹಾಗೂ ಗಾಯಕ ಮೃತಪಟ್ಟ ಘಟನೆ ಬಿಹಾರದ ಕೈಮೂರ್ ನಲ್ಲಿ ನಡೆದಿದೆ. ಜನಪ್ರಿಯ ಭೋಜ್ಪುರಿ ನಟಿ ಆಂಚಲ್ ತಿವಾರಿ ಸೋಮವಾರ ಬಿಹಾರದ ಕೈಮೂರ್ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಗಾಯಕ ಛೋಟು ಪಾಂಡೆ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಒಟ್ಟು ಒಂಬತ್ತು ಜನರು ಸಾವನ್ನಪ್ಪಿದ್ದಾರೆ, ಇದು ಭೋಜ್ಪುರಿ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ.
ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಟ್ರಕ್, ಎಸ್ಯುವಿ ಮತ್ತು ಮೋಟಾರ್ ಸೈಕಲ್ ನಡುವೆ ಸಂಭವಿಸಿದ ಅಪಘಾತದಲ್ಲಿ ಭೋಜ್ಪುರಿ ಗಾಯಕ ಛೋಟು ಪಾಂಡೆ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದಲ್ಲದೆ, ಭೋಜ್ಪುರಿ ನಟಿ ಸಿಮ್ರಾನ್ ಶ್ರೀವಾಸ್ತವ ಕೂಡ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ವರದಿಯ ಪ್ರಕಾರ, ಮೊಹಾನಿಯಾ ಪೊಲೀಸ್ ಠಾಣೆ ಪ್ರದೇಶದ ದೇವಕಾಳಿ ಗ್ರಾಮದ ಬಳಿಯ ಜಿಟಿ ರಸ್ತೆಯಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಭೋಜ್ಪುರಿ ಗಾಯಕ ವಿಮ್ಲೇಶ್ ಪಾಂಡೆ ಅಲಿಯಾಸ್ ಛೋಟು ಪಾಂಡೆ ಕೂಡ ಅವರಲ್ಲಿ ಸೇರಿದ್ದಾರೆ ಎಂದು ಮೊಹಾನಿಯಾ ಡಿಎಸ್ಪಿ ದಿಲೀಪ್ ಕುಮಾರ್ ತಿಳಿಸಿದ್ದಾರೆ. ಮೃತರನ್ನು ಆಂಚಲ್ ತಿವಾರಿ, ಸಿಮ್ರಾನ್ ಶ್ರೀವಾಸ್ತವ, ಪ್ರಕಾಶ್ ರಾಮ್, ದಧಿಬಲ್ ಸಿಂಗ್, ಅನು ಪಾಂಡೆ, ಶಶಿ ಪಾಂಡೆ, ಸತ್ಯ ಪ್ರಕಾಶ್ ಮಿಶ್ರಾ ಮತ್ತು ಬಾಗಿಶ್ ಪಾಂಡೆ ಎಂದು ಗುರುತಿಸಲಾಗಿದೆ.