ಈ ಗಂಡ –ಹೆಂಡತಿ ಜಗಳವಾಡಿಕೊಂಡು ಇನ್ನೆಂದೂ ಜೀವನದಲ್ಲಿ ಒಂದಾಗಿ ಜೀವಿಸಬಾರದು ಎಂಬ ಉದ್ದೇಶದಿಂದ ವಿಚ್ಛೇದನ ಪಡೆದು ಬೇರೆಯಾಗಿದ್ದರು.
ಆದರೆ, ವಿಧಿ ಮಾತ್ರ ಅವರನ್ನು ಬೇರೆ ಬೇರೆಯಾಗಿರಲು ಬಿಡಲಿಲ್ಲ. ಇಬ್ಬರನ್ನೂ ಸಾವಿನ ಮೂಲಕ ಮತ್ತೆ ಒಂದಾಗಿಸಿದೆ.
ವೈಭವಿ ತ್ರಿಪಾಠಿ ಮತ್ತು ಅವರ ಮಾಜಿ ಪತಿ ಅಶೋಕ್ ತ್ರಿಪಾಠಿಯವರ ನಡುವೆ ವೈಮನಸ್ಯ ಉಂಟಾಗಿ ಇಬ್ಬರೂ ಕೌಟುಂಬಿಕ ನ್ಯಾಯಾಲಯದ ಮೂಲಕ ವಿಚ್ಛೇದನ ಪಡೆದಿದ್ದರು. ಆದರೆ, ನ್ಯಾಯಾಲಯವು ಇವರಿಬ್ಬರನ್ನೂ ಮಕ್ಕಳ ಸಮೇತ ವಿದೇಶ ಪ್ರವಾಸ ಮಾಡಿಕೊಂಡು ಬರುವಂತೆ ಆದೇಶ ನೀಡಿತ್ತು.
ಅದರಂತೆ ಇವರಿಬ್ಬರು ತಮ್ಮ ಮಕ್ಕಳೊಂದಿಗೆ ನೇಪಾಳ ಪ್ರವಾಸಕ್ಕೆ ತೆರಳಿದ್ದರು. ಆದರೆ, ಅವರಿದ್ದ ವಿಮಾನ ನಿನ್ನೆ ಪತನಗೊಂಡು ಮಕ್ಕಳ ಸಹಿತ ವಿಚ್ಛೇದಿತ ದಂಪತಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ ವಿಮಾನ ಪತನವಾದ ಸ್ಥಳದಲ್ಲಿ ಅನೇಕ ಶವಗಳು ಪತ್ತೆಯಾಗಿವೆ.
BIG NEWS: ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಚರ್ಚಿಸಲು ಬೇರೆ ವಿಚಾರವಿಲ್ಲವೇ….? ವಿಪಕ್ಷ ನಾಯಕನಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು
ನೇಪಾಳ ಸೇನೆ ಮತ್ತು ಸಶಸ್ತ್ರ ಪೊಲೀಸ್ ಪಡೆಗಳು ಶವಗಳನ್ನು ಸಂಗ್ರಹಿಸುವ ಮತ್ತು ಪತ್ತೆ ಮಾಡುವ ಕಾರ್ಯದಲ್ಲಿ ನಿರತವಾಗಿವೆ. ಸ್ಥಳೀಯ ಹೊಟೇಲ್ ಮಾಲೀಕರೊಬ್ಬರು ಹೇಳುವ ಪ್ರಕಾರ ವಿಮಾನ ಪತನವಾಗಿರುವುದರಿಂದ ವಿಮಾನದಲ್ಲಿದ್ದ ಯಾವೊಬ್ಬ ಪ್ರಯಾಣಿಕರೂ ಬದುಕುಳಿದಿಲ್ಲ. ಕೆಲವು ದೇಹಗಳು ಗುರುತಿಸಲಾಗದಷ್ಟು ಛಿದ್ರಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಭವಿ ಬಾಂದ್ರಾ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ವೈಭವಿ ಸಾವಿನ ಮಾಹಿತಿಯನ್ನು ಚಿಂತಾಜನಕ ಸ್ಥಿತಿಯಲ್ಲಿರುವ ತಾಯಿಗೆ ತಿಳಿಸಬೇಡಿ ಎಂದು ವೈಭವಿ ಸಹೋದರಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಈ ದಂಪತಿಗೆ ಕೌಟುಂಬಿಕ ನ್ಯಾಯಾಲಯವು ಪ್ರತಿ ವರ್ಷ ಮಕ್ಕಳೊಂದಿಗೆ 10 ದಿನಗಳ ಕಾಲ ಪ್ರವಾಸ ಮಾಡಬೇಕೆಂದು ನಿಬಂಧನೆ ವಿಧಿಸಿತ್ತು. ಈ ನಿಬಂಧನೆ ಹಿನ್ನೆಲೆಯಲ್ಲಿ ದಂಪತಿ ನೇಪಾಳ ಪ್ರವಾಸ ಕೈಗೊಂಡಿದ್ದರು.