ಪ್ರಪಂಚದಾದ್ಯಂತ ಕೊರೋನಾ ಮಹಾಮಾರಿಯಿಂದಾಗಿ ವಿಶ್ವದ ಹಲವು ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ್ದವು. ಹೀಗಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸವಾದ್ರೆ, ಮಕ್ಕಳಿಗೆ ಆನ್ಲೈನ್ ಪಾಠ ಶುರುವಾಯ್ತು.
ಹೀಗಾಗಿ ನಾಲ್ಕು ಗೋಡೆಗಳ ಮಧ್ಯೆಯೇ ಇದ್ದು ಬೇಸತ್ತು ಹೋಗುವ ಬದಲು ಸವಾರಿ ಮಾಡೋಕೆ ಇಲ್ಲೊಂದು ದಂಪತಿ ಮಾಡಿದ ಪ್ಲಾನ್ ಏನು ಗೊತ್ತಾ..?
ಯುಎಸ್ ನ ಎಲಿಜಬೆತ್ ಸ್ಪೈಕ್ ಹಾಗೂ ಆಕೆಯ ಸಂಗಾತಿ ಸ್ಪೈಕ್ ಹಳೆಯ ಶಾಲಾ ಬಸ್ ಅನ್ನು ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಮೊಬೈಲ್ ಮನೆಗಾಗಿ ಕುಟುಂಬವು $ 15,000 ಖರ್ಚು ಮಾಡಿದ್ದು, ಮೂರು ಹಾಸಿಗೆಗಳ ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಸ್ನಾನಗೃಹ, ಸ್ನಾನದ ಕೋಣೆ ಮತ್ತು ಸಣ್ಣ ಅಡುಗೆಮನೆಯ ಸ್ಥಳವೂ ಇದರಲ್ಲಿದೆ.
500 ರೂ.ಗೆ ಪತ್ನಿಯನ್ನೇ ಮಾರಾಟ ಮಾಡಿದ ಭೂಪ, ಏಕಾಂತ ಸ್ಥಳಕ್ಕೆ ಕರೆದೊಯ್ದು ಖರೀದಿಸಿದವನಿಂದ ಅತ್ಯಾಚಾರ
ಎಲಿಜಬೆತ್ ಮತ್ತು ಆಕೆಯ ಪತಿ ಚೇಸಿಂಗ್ ದ ಕೋಸ್ಟ್ ಲೈನ್ ಎಂಬ ಇನ್ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದು, ತಮ್ಮ ಮೊಬೈಲ್ ಮನೆಯ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪೋಷಕರು ಹಾಗೂ ಮಕ್ಕಳು ಊಟ-ಪಾಠ ಎಲ್ಲಾ ಇದರಲ್ಲೇ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೆ ಯುಎಸ್ ನ 16 ರಾಜ್ಯಗಳಿಗೆ ಇವರು ಪ್ರಯಾಣಿಸಿದ್ದಾರೆ. ಮಕ್ಕಳು ಯಾವುದೇ ತರಗತಿಗಳಿಗೆ ಗೈರಾಗದೆ ತಮ್ಮ ಪ್ರವಾಸವನ್ನು ಆನಂದಿಸಿದ್ದಾರೆ.
https://www.instagram.com/p/CUi3DzRJ487/?utm_source=ig_web_copy_link
https://www.instagram.com/p/CT7EuIILtSu/?utm_source=ig_web_copy_link
https://www.instagram.com/p/CS_lg1WLQ-G/?utm_source=ig_web_copy_link