ಭಾರತದಲ್ಲಿ ಸಾಮಾನ್ಯವಾಗಿ ದ್ವಿಚಕ್ರ ವಾಹನದೊಳಗೆ ಹಾವುಗಳು ಸೇರಿಕೊಂಡಿರುವ ಬಗ್ಗೆ ನೀವು ಕೇಳಿರುತ್ತೀರಿ ಅಥವಾ ಓದಿರುತ್ತೀರಿ. ಆದರೆ, ಇಲ್ಲೊಂದೆಡೆ ಕಾರಿನೊಳಗೆ ಹೆಬ್ಬಾವು ಸುತ್ತಿಕೊಂಡಿರುವ ಫೋಟೋ ವೈರಲ್ ಆಗಿದೆ.
ಕ್ವೀನ್ಸ್‌ಲ್ಯಾಂಡ್‌ನಲ್ಲಿ ಆಸ್ಟ್ರೇಲಿಯಾದ ಕುಟುಂಬವೊಂದು ವಿಹಾರಕ್ಕೆ ತೆರಳಿತ್ತು. ಕಾರನ್ನು ಬ್ರಿಸ್ಬೇನ್ ಬಳಿಯ ನಾರ್ತ್ ಲೇಕ್ಸ್‌ನಲ್ಲಿ ಬುಷ್‌ಲ್ಯಾಂಡ್‌ನ ಪಕ್ಕದಲ್ಲಿ ನಿಲ್ಲಿಸಿ, ಸದಸ್ಯರು ಕಾರಿನಿಂದ ಇಳಿದಿದ್ದರು. ವಾಪಸ್ ಬಂದು ನೋಡುವಷ್ಟರಲ್ಲಿ ಕಾರಿನೊಳಗೆ 1.3 ಮೀಟರ್ ಉದ್ದದ ಹೆಬ್ಬಾವನ್ನು ಕಂಡ ಕುಟುಂಬ ಸದಸ್ಯರು ಒಂದು ಕ್ಷಣ ದಂಗಾಗಿದ್ದಾರೆ.
ಕಾರಿನೊಳಗಿನ ಕನ್ನಡಿಯ ಸುತ್ತಾ ಹೆಬ್ಬಾವು ಸುತ್ತಿಕೊಂಡಿರುವ ಫೋಟೋವನ್ನು ಕಾರೀನ ಮಾಲೀಕ ಜೋಶ್ ಕ್ಯಾಸಲ್ ಕ್ಲಿಕ್ಕಿಸಿದ್ದಾರೆ. ಕೂಡಲೇ ಉರಗತಜ್ಞರನ್ನು ಕುಟುಂಬ ಸಂಪರ್ಕಿಸಿದ್ದು, ಅವರು ಬಂದು ಹಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಇನ್ನು ಕಾರಿನ ಗಾಜನ್ನು ತೆರೆದಿದ್ದರಿಂದ ಹೆಬ್ಬಾವು ಕಾರಿನೊಳಗೆ ಹೋಗಲು ಸಾಧ್ಯವಾಗಿದೆ ಎಂದು ಕಾರು ಮಾಲೀಕ ಜೋಶ್ ಕ್ಯಾಸಲ್ ವಿವರಿಸಿದ್ದಾರೆ.
ಅಂದಹಾಗೆ ಕಾರು ಮಾಲೀಕ ಕ್ಯಾಸಲ್ ಕೂಡ ಸ್ವತಃ ಹಾವು ಹಿಡಿಯುತ್ತಾನೆ. ಬ್ರಿಸ್ಬೇನ್, ಇಪ್ಸ್‌ವಿಚ್ ಮತ್ತು ಲೋಗನ್‌ನಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಹಾವು ಹಿಡಿಯುವ ಫೋಟೋಗಳನ್ನು ನಿಯಮಿತವಾಗಿ ತನ್ನ ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಪುಟಗಳಲ್ಲಿ ಹಂಚಿಕೊಳ್ಳುತ್ತಾನೆ.