ತೆಲಂಗಾಣದ ಮಂಚಾರ್ಯಾಲಾ ಜಿಲ್ಲೆಯಲ್ಲಿ ಶನಿವಾರ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಆರು ಸದಸ್ಯರು ಸಜೀವ ದಹನಗೊಂಡಿದ್ದಾರೆ.
ಅವಘಡದಲ್ಲಿ ಮನೆ ಮಾಲೀಕ ಶಿವಯ್ಯ(50), ಅವರ ಪತ್ನಿ ಪದ್ಮಾ(45), ಪದ್ಮಾ ಅವರ ಅಕ್ಕನ ಮಗಳು ಮೌನಿಕಾ(23) ಮತ್ತು ಅವರ ಇಬ್ಬರು ಪುತ್ರಿಯರು ಸಾವನ್ನಪ್ಪಿದ್ದಾರೆ.
ಮಂದಮರಿ ಸರ್ಕಲ್ ಇನ್ಸ್ ಪೆಕ್ಟರ್ ಆಫ್ ಪೊಲೀಸ್ ಪ್ರಮೋದ್ ಕುಮಾರ್ ಮಾತನಾಡಿ, ತೆಲಂಗಾಣದ ಮಂದಮರ್ರಿ ಮಂಡಲದ ವೆಂಕಟಾಪುರದ ಮನೆಯಲ್ಲಿ ಶಿವಯ್ಯ ಮತ್ತು ಅವರ ಪತ್ನಿ ಪದ್ಮಾ ವಾಸವಾಗಿದ್ದು, ಎರಡು ದಿನಗಳ ಹಿಂದೆ ಪದ್ಮಾ ಅವರ ಸೊಸೆ ಮೌನಿಕಾ, ಇಬ್ಬರು ಹೆಣ್ಣುಮಕ್ಕಳು ಬಂದಿದ್ದರು. ರಾತ್ರಿ 12 ಗಂಟೆ ಸಮಾರಿಗೆ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ದೊಡ್ಡದಾಗಿ ಬೆಂಕಿ ಹೊತ್ತಿಕೊಂಡಿರುವುದನ್ನು ನೆರೆಹೊರೆಯವರು ಗಮನಿಸಿ, ಕೂಡಲೇ ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ತಲುಪುವಷ್ಟರಲ್ಲಿ ಇಡೀ ಮನೆಗೆ ಬೆಂಕಿ ಬಿದ್ದಿತ್ತು. ಮಾಹಿತಿಯ ಪ್ರಕಾರ, ಮನೆಯಲ್ಲಿದ್ದ ಒಟ್ಟು ಆರು ಸದಸ್ಯರು ಸಾವನ್ನಪ್ಪಿದ್ದಾರೆ. ಬೆಂಕಿಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.