ಭಾರತ ಸೇರಿದಂತೆ ಪ್ರತಿಯೊಂದು ದೇಶವೂ ತನ್ನದೆ ಆದ ಪದ್ಧತಿಗಳನ್ನು ಪಾಲಿಸಿಕೊಂಡು ಬರ್ತಿದೆ. ಕೆಲ ದೇಶಗಳಲ್ಲಿ ಅಚ್ಚರಿಯಾಗುವಂತಹ ಪದ್ಧತಿಗಳಿವೆ.
ಗ್ರಾಹಕರಿಗೆ ಗುಡ್ ನ್ಯೂಸ್: ಮನೆಯಲ್ಲೇ ಕುಳಿತು ಬದಲಿಸಬಹುದು ಬ್ಯಾಂಕ್ ಶಾಖೆ
ಇಂಡೋನೇಷ್ಯಾದಲ್ಲಿ ವಿಚಿತ್ರ ಸಂಪ್ರದಾಯ ರೂಢಿಯಲ್ಲಿದೆ. ಕುಟುಂಬದ ಸದಸ್ಯರು ಸಾವನ್ನಪ್ಪಿದಾಗ, ಮನೆಯ ಮಹಿಳೆಯರು ತಮ್ಮ ಬೆರಳುಗಳನ್ನು ಕತ್ತರಿಸಬೇಕಾಗುತ್ತದೆ. ಇಂಡೋನೇಷ್ಯಾದ ಬುಡಕಟ್ಟು ಜನಾಂಗದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಡ್ಯಾನಿ ಬುಡಕಟ್ಟಿನ ಮಹಿಳೆಯರು, ಭಾವನಾತ್ಮಕ ನೋವಿನ ಜೊತೆಗೆ ದೈಹಿಕ ನೋವನ್ನು ಎದುರಿಸಬೇಕಾಗುತ್ತದೆ.
ಬೆಚ್ಚಿಬೀಳಿಸುವಂತಿದೆ ಈ ʼವಿಕೃತ ಕಾಮಿʼಯ ಇನ್‌ಸ್ಟಾ ಪೋಸ್ಟ್
ಪ್ರೀತಿಪಾತ್ರರು ಸತ್ತಾಗ, ಈ ಇಂಡೋನೇಷಿಯನ್ ಬುಡಕಟ್ಟಿನ ಮಹಿಳೆಯರು ತಮ್ಮ ಬೆರಳುಗಳ ಮೇಲಿನ ಅರ್ಧವನ್ನು ಧಾರ್ಮಿಕವಾಗಿ ಕತ್ತರಿಸುತ್ತಾರೆ.
ಬೆರಳನ್ನು ಕತ್ತರಿಸುವುದು ಪ್ರಕ್ಷುಬ್ಧ ಆತ್ಮವನ್ನು ಸತ್ತ ವ್ಯಕ್ತಿಯಿಂದ ದೂರವಿರಿಸುತ್ತದೆ ಎಂದು ನಂಬಲಾಗಿದೆ. ಇದು ದುಃಖದ ಸಂಕೇತವಂತೆ. ಕೆಲವು ಮಕ್ಕಳ ಬೆರಳುಗಳನ್ನು ತಾಯಂದಿರು ಕತ್ತರಿಸುತ್ತಾರೆ. ಈ ಅಭ್ಯಾಸವನ್ನು ಇಕಿಪಾಲಿನ್ ಎಂದು ಕರೆಯಲಾಗುತ್ತದೆ. ಬೆರಳುಗಳನ್ನು ಕಚ್ಚುವ ಈ ಅಸಾಮಾನ್ಯ ಅಭ್ಯಾಸವನ್ನು ಇಂಡೋನೇಷ್ಯಾ ಸರ್ಕಾರವು ಕೆಲವು ವರ್ಷಗಳ ಹಿಂದೆ ನಿಷೇಧಿಸಿದೆ. ಆದ್ರೂ ಈ ಪದ್ಧತಿ ತೆರೆಮರೆಯಲ್ಲಿ ನಡೆಯುತ್ತಿದೆ.
ಈ ಬುಡಕಟ್ಟಿನಲ್ಲಿ 2.5 ಮಿಲಿಯನ್‌ಗಿಂತಲೂ ಹೆಚ್ಚು ಜನರಿದ್ದಾರೆ. ಪಶ್ಚಿಮ ನ್ಯೂ ಗಿನಿಯಾದ ಎತ್ತರದ ಪ್ರದೇಶದಲ್ಲಿ ವಾಸಿಸುತ್ತಾರೆ.