![Family heckles Pakistan minister, calls him 'chor'](https://www.siasat.com/wp-content/uploads/2022/07/Pak-chor.png)
ಪಾಕಿಸ್ತಾನದ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ರೆಸ್ಟೊರೆಂಟ್ನಲ್ಲಿ ಆರ್ಡರ್ ಮಾಡಲು ನಿಂತಿದ್ದ ಸಂದರ್ಭದಲ್ಲಿ ಒಂದು ಗುಂಪು ಸುತ್ತುವರಿದು ಚೋರ್ ಚೋರ್…… ಎಂದು ಸತತವಾಗಿ ಘೋಷಣೆ ಕೂಗುತ್ತದೆ. ಅಲ್ಲಿದ್ದ ಜನರೆಲ್ಲ ಇದನ್ನು ಅವಾಕ್ಕಾಗಿ ನೋಡುತ್ತಾರೆ. ಕೆಲವರಂತೂ ಬಿದ್ದು ಬಿದ್ದು ನಗುವುದೂ ಸಹ ವಿಡಿಯೋದಲ್ಲಿ ಕಾಣಿಸುತ್ತದೆ.
ಘೋಷಣೆ ಹಾಕಿದವರು ನಿಧಾನಕ್ಕೆ ಜಾಗ ಖಾಲಿ ಮಾಡುತ್ತಾರೆ. ಈ ನಡುವೆ ಸಚಿವ ಇಕ್ಬಾಲ್ ಏನೆಂದು ಪ್ರಶ್ನಿಸಲು ಪ್ರಯತ್ನಿಸುವುದು ಮತ್ತು ತಮ್ಮ ಕುಟುಂಬಕ್ಕೆ ಏನೋ ಹೇಳುವುದು ಕಾಣಿಸುತ್ತದೆ.
ವಿಡಿಯೊದಲ್ಲಿ ಮಕ್ಕಳು ಸೇರಿದಂತೆ ಐವರಿದ್ದ ಕುಟುಂಬವು ಇಕ್ಬಾಲ್ನನ್ನು ಚೋರ್ ಚೋರ್…… ಎಂದು ಹತ್ತಾರು ಬಾರಿ ಕೂಗಿತ್ತು. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಒಂದಷ್ಟು ಪ್ರತಿಕ್ರಿಯೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ಬಂದಿವೆ.
ಇನ್ನು ಆ ಸಚಿವ ಟ್ವೀಟ್ ಮಾಡಿ, ಆ ಕುಟುಂಬ ತಮ್ಮನ್ನು ಗಣ್ಯರೆಂದು ಭಾವಿಸಿಕೊಂಡಿದ್ದರೆ, ಅವರು ಅಣಕಿಸಿದ ರೀತಿ ಸಂಸ್ಕೃತಿ ರಹಿತರು ಎಂದು ತೋರಿಸಿತು ಎಂದು ಹೇಳಿಕೊಂಡಿದ್ದಾರೆ. ಆದರೆ, ಆ ಕುಟುಂಬ ಆ ರೀತಿ ಬಹಿರಂಗವಾಗಿ ನಿಂದಿಸಲು ಕಾರಣ ಏನೆಂದು ಗೊತ್ತಾಗಿಲ್ಲ.