ಇನ್ನೇನು ಕ್ರಿಸ್ಮಸ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದೆ. ಹಬ್ಬಕ್ಕಾಗಿ ಮನೆಗಳಲ್ಲಿ ಹಲವು ಪ್ರಿಪರೇಷನ್ಸ್ ನಡೆಯುತ್ತಿರುತ್ತದೆ. ಕ್ರಿಸ್ಮಸ್ ಟ್ರೀಗಳು, ಬಣ್ಣದ ದೀಪಗಳು, ಮೇಣದಬತ್ತಿಗಳು ಹಾಗೂ ಇತರೆ ಸುಂದರವಾದ ಅಲಂಕಾರಗಳನ್ನು ಮಾಡಲಾಗುತ್ತದೆ.
ಆದರೆ ಆಸ್ಟ್ರೇಲಿಯಾದ ಒಂದು ಕುಟುಂಬವು ತಮ್ಮ ಕ್ರಿಸ್ಮಸ್ ಟ್ರೀ ಸುತ್ತಾ ಏನೋ ಸುತ್ತಿಕೊಂಡಿದ್ಯಲ್ಲಾ ಅಂತಾ ಗಮನಿಸಿದ್ದಾರೆ. ಆದರೆ, ಅದು ಅಲಂಕಾರಿಕ ವಸ್ತುವಲ್ಲ, ಟ್ರೀಯಲ್ಲಿ ಕಂದು ಬಣ್ಣದ ಹಾವು ಅಡಗಿದೆ ಎಂದು ಗೊತ್ತಾದಾಗ ಶಾಕ್ ಆಗಿದ್ದಾರೆ.
ಅಡಿಲೇಡ್ನ ಗಲ್ಫ್ವ್ಯೂ ಹೈಟ್ಸ್ನ ಕುಟುಂಬವು ತಮ್ಮ ಮರವನ್ನು ಅಲಂಕರಿಸುತ್ತಿರಬೇಕಾದರೆ ಸರ್ಪವನ್ನು ಗುರುತಿಸಿದೆ. ಹಾವು, ಬಾಬಲ್ಸ್ನಲ್ಲಿ ಮರದ ಸುತ್ತಲೂ ಸುತ್ತಿಕೊಂಡಿತ್ತು. ಅದಕ್ಕೂ ಮೊದಲು, ಮರವನ್ನು ಇರಿಸಲಾಗಿದ್ದ ಶೇಖರಣಾ ಪೆಟ್ಟಿಗೆಯಲ್ಲಿ ಅದು ತನ್ನ ದಾರಿಯನ್ನು ಕಂಡುಕೊಂಡಿತು.
ಕೂಡಲೇ ಕುಟುಂಬವು ಉರಗ ತಜ್ಞ ಜರಾಡ್ ವೇ ಅವರನ್ನು ಸಂಪರ್ಕಿಸಿದ್ದಾರೆ. ಬಹಳ ಶ್ರಮಪಟ್ಟು ಹಾವನ್ನು ಹೊರತೆಗೆಯಲಾಗಿದೆ. ಕ್ರಿಸ್ಮಸ್ ಟ್ರೀ ನಲ್ಲಿ ಲೈಟ್ ಗಳು ಹಾಗೂ ತಂತಿಗಳು ಇದ್ದಿದ್ರಿಂದ ಅದರಿಂದ ವಿಷಕಾರಿ ಹಾವನ್ನು ಹೊರತೆಗೆಯುವುದು ಸುಲಭದ ವಿಷಯವಾಗಿರಲಿಲ್ಲ.
ಇದೀಗ ಚಳಿಗಾಲದ ಋತುವಾದ್ದರಿಂದ ಬೆಚ್ಚಗಿನ ಜಾಗವನ್ನು ಹುಡುಕುತ್ತಾ ಹಾವು ಇಲ್ಲಿ ಸೇರಿಕೊಂಡಿದೆ ಅಂತಾ, ಸರೀಸೃಪವನ್ನು ರಕ್ಷಿಸಿದ ಬಳಿಕ ಉರಗ ತಜ್ಞ ಹೇಳಿದ್ದಾರೆ. ಇತ್ತೀಚೆಗೆ ಥಾಯ್ಲೆಂಡ್ನಲ್ಲಿ ಹೆಬ್ಬಾವು ಕುಟುಂಬವೊಂದರ ಸೀಲಿಂಗ್ನಿಂದ ಕೆಳಗೆ ಬಿದ್ದ ಘಟನೆ ನಡೆದಿತ್ತು.