ಹೊಸ ಮನೆಗೆ ಅದಾಗ ತಾನೇ ಬಂದಿದ್ದ ಕುಟುಂಬವೊಂದಕ್ಕೆ ಅಲ್ಲಿನ ಗೋಡೆಯೊಂದರ ಮೇಲೆ ಬರೆದಿದ್ದ ಸಂದೇಶವನ್ನು ಕಂಡು ಅಚ್ಚರಿಯಾಗಿದೆ. ಈ ನೋಟ್ ಅನ್ನು ಕಂಡು, ಅದರ ಸ್ವಾರಸ್ಯವೇನೆಂದು ಪತ್ತೆ ಮಾಡಲು ಮುಂದಾಗಿದೆ ಕುಟುಂಬ.
ಹೊಸ ಮನೆಗೆ ಬಂದಿದ್ದ ಮರ್ಫಿ ಕುಟುಂಬದ ಮಗಳ ಕೋಣೆಯಲ್ಲಿದ್ದ ವಾಲ್ಪೇಪರ್ ಒಂದರ ಹಿಂದೆ ಇದ್ದ ಈ ಸಂದೇಶ 1975ರಷ್ಟು ಹಳೆಯದು ಎಂದು ಗೊತ್ತಾಗಿದೆ.
ಗೋಡೆ ಮೇಲೆ ಬರೆದಿದ್ದ ಪದ್ಯವನ್ನು ನೋಟ್ ಮಾಡಿಕೊಂಡ ಮರ್ಫಿ ಕುಟುಂಬ ಸಾಮಾಜಿಕ ಜಾಲತಾಣದ ಮುಖಾಂತರ ಆ ಪದ್ಯವನ್ನು ಬರೆದವರು ಯಾರೆಂದು ಪತ್ತೆ ಮಾಡಲು ಮುಂದಾಗಿದೆ.
ಪುರುಷರ ಹಾಕಿ ತಂಡ ಸೆಮಿಫೈನಲ್ ತಲುಪುತ್ತಿದ್ದಂತೆ ಅಳುತ್ತ ಕಾಮೆಂಟ್ರಿ ನೀಡಿದ ಕಾಮೆಂಟೇಟರ್ಸ್
ಪದ್ಯ ಬರೆದಿದ್ದ ಎಯ್ಲೀನ್ ವಾಂಮ್ಸೆ ಯಾರೆಂದು ತಮಗೆ ಗೊತ್ತಿರುವುದಾಗಿ ಕೆಲ ದಿನಗಳ ಬಳಿಕ ಮರ್ಫಿ ಕುಟುಂಬವನ್ನು ಭೇಟಿಯಾದ ವ್ಯಕ್ತಿಯೊಬ್ಬರು ಹೇಳಿದ್ದಲ್ಲದೇ, ಪಾಮೆರ್ ಎಂದು ಹೆಸರು ಬದಲಿಸಿಕೊಂಡಿರುವ ಎಯ್ಲೀನ್ರನ್ನು ಭೇಟಿ ಮಾಡಿಸಿದ್ದಾರೆ.
“ಅವರು ಅದನ್ನು ಪತ್ತೆ ಮಾಡಿರುವುದನ್ನು ಕಂಡು ಖುಷಿಯಾಗಿದೆ. ಆಗ ನನಗೆ 14-15 ವರ್ಷ ವಯಸ್ಸಾಗಿರಬಹುದು. ಅದನ್ನು ಬರೆದಿದ್ದನ್ನು ಅಲ್ಪಸ್ವಲ್ಪ ನೆನಪಿದೆ. ಬೆಡ್ರೂಂ ಅನ್ನು ಸಿಂಗರಿಸಲಿದ್ದಾರೆ ಎಂದು ನನಗೆ ಗೊತ್ತಿತ್ತು, ನೀವು ಇದರೊಂದಿಗೆ ಏನಾದರೂ ಮಾಡಿಕೊಳ್ಳಿ” ಎಂದು ಎಯ್ಲಿನ್ ಹೇಳಿದ್ದಾರೆ.