ಕ್ರಿಸ್ಮಸ್ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕ್ರಿಶ್ಚಿಯನ್ ಬಾಂಧವರು ಈಗಾಗಲೇ ಹಬ್ಬಕ್ಕಾಗಿ ಸಕಲ ತಯಾರಿಗಳನ್ನು ಮಾಡುತ್ತಿದ್ದು, ಕ್ರಿಸ್ಮಸ್ ಗಾಗಿ ಕಾಯುತ್ತಿದ್ದಾರೆ. ಇಲ್ಲೊಂದು ಕುಟುಂಬ ಕ್ರಿಸ್ಮಸ್ ಹಬ್ಬಕ್ಕೆ ಒಂದೂವರೆ ತಿಂಗಳು ಇರುವಂತೆಯೇ ದೀಪಗಳ ಅಲಂಕಾರ ಮಾಡಿದ್ದು, ಇದೀಗ 75,000 ರೂ. ದಂಡ ತೆರಬೇಕಾಗಿದೆ.
ಯುಎಸ್‌ನಲ್ಲಿರುವ ಕುಟುಂಬವು ತಮ್ಮ ಮನೆಯ ಹೊರಗೆ ಕ್ರಿಸ್ಮಸ್ ಅಲಂಕಾರಗಳನ್ನು ಮಾಡಿದ್ದಾರೆ. ಇದಕ್ಕಾಗಿ ಅವರಿಗೆ 1,000 ಡಾಲರ್ (ರೂ. 75,000) ದಂಡ ವಿಧಿಸಲಾಗಿದೆ. ಫ್ಲೋರಿಡಾದ ವೆಸ್ಟ್‌ಚೇಸ್‌ನ ಮೊಫಾ ಕುಟುಂಬವು ನವೆಂಬರ್ 6 ರಂದು ಕ್ರಿಸ್ಮಸ್ ದೀಪಗಳನ್ನು ವೃತ್ತಿಪರ ಡೆಕೋರೇಟರ್‌ಗಳಿಂದ ಅಲಂಕರಿಸಿದ್ದಾರೆ.
ಟ್ವಿಟರ್‌ನ ಹೊಸ ಬಾಸ್‌ಗೆ ಶುಭಾಶಯ ಕೋರಿದ ಎಲಾನ್ ಮಸ್ಕ್
ಸ್ಲಾಟ್‌ಗಳು ಬೇಗನೆ ಬುಕ್ ಆಗುತ್ತವೆ ಎಂದು ಅವರು ಒಂದೂವರೆ ತಿಂಗಳ ಹಿಂದೆಯೇ ಮನೆಗೆ ದೀಪದಲಂಕಾರ ಮಾಡಿದ್ದಾರೆ. ಅಲಂಕಾರ ಮಾಡಿದ ಎರಡು ದಿನಗಳ ನಂತರ ಕುಟುಂಬಕ್ಕೆ ಸ್ಥಳೀಯ ಸಮುದಾಯ ಸಂಘ ನೋಟಿಸ್ ನೀಡಿದ್ದಾರೆ. ಕ್ರಿಸ್ಮಸ್ ಹಬ್ಬಕ್ಕೆ ಇನ್ನು ಕೆಲವು ದಿನಗಳಿದ್ದರೂ ಇಷ್ಟು ಬೇಗನೆ ಅಲಂಕಾರ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ,
ಮೊಫಾ ಕುಟುಂಬದ ನೆರೆಹೊರೆಯವರು ಮೊದಲು ಈ ಬಗ್ಗೆ ದೂರು ನೀಡಿದ್ದಾರೆ ಎಂದು ಸಮುದಾಯ ಸಂಘದ ವಕೀಲರು ಹೇಳಿದ್ದಾರೆ. ಈ ಬಗ್ಗೆ ಕುಟುಂಬದ ಸದಸ್ಯ ಫೇಸ್ಬುಕ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದೀಗ ಕುಟುಂಬಕ್ಕೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಬಲವಾಗಿ ನಿಂತಿದ್ದಾರೆ.