ಝಾನ್ಸಿ : ರೈಲಿನಲ್ಲಿ ಬಾಂಬ್ ಇದೆ ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದರ ಹಿನ್ನೆಲೆಯಲ್ಲಿ 2 ಗಂಟೆಗಳ ಕಾಲ ತಪಾಸಣೆ ನಡೆಸಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಟಿಕಾಮ್ ಗಢ್ನಿಂದ ರಾಷ್ಟ್ರರಾಜಧಾನಿಗೆ ಹೊರಟಿದ್ದ ರೈಲಿನಲ್ಲಿ ಬಾಂಬ್ ಇದೆ ಎಂದು ಉಮಾ ಭಾರತಿ ಹೇಳಿದ್ದಾರೆ. ಹೀಗಾಗಿ ಕೂಡಲೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು ರೈಲನ್ನು ಲಲಿತ್ ಪುರ್ ಸ್ಟೇಷನ್ ನಲ್ಲಿ ನಿಲ್ಲಿಸಿ ಸುಮಾರು 2 ಗಂಟೆಗಳಷ್ಟು ಸಮಯ ತಪಾಸಣೆಗೆ ಒಳಪಡಿಸಿದ್ದಾರೆ. ಆದರೆ, ಯಾವುದೇ ಬಾಂಬ್ ನ ಕುರುಹು ಪತ್ತೆಯಾಗದ ಕಾರಣ ರೈಲು ಚಲಿಸಲು ಅನುಮತಿ ನೀಡಲಾಯಿತು. ಆನಂತರ ಮತ್ತೆ ಝಾನ್ಸಿಯಲ್ಲಿ ಮತ್ತೊಮ್ಮೆ ತಪಾಸಣೆ ನಡೆಸಲಾಯಿತು.
ಬಿಜೆಪಿ ನಾಯಕಿ ಉಮಾ ಭಾರತಿ ಅವರು, ಗುರುವಾರ ಈ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಆ ನಂತರ ಈ ರೈಲು ಲಲಿತ್ ಪುರ್ ನಿಂದ ಹೊರಗೆ ಬರುತ್ತಿದ್ದಂತೆ ಬಾಂಬ್ ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕೂಡಲೇ ರೈಲನ್ನು ನಿಲ್ಲಿಸಿ ಪರಿಶೀಲನೆ ನಡೆಸಲಾಯಿತು. ಆದರೆ, ರೈಲಿನಲ್ಲಿ ಬಾಂಬ್ ಇದೆ ಎಂದು ಯಾವ ಕಾರಣಕ್ಕೆ ಅವರು ಹೇಳಿದ್ದಾರೆ? ರೈಲ್ವೆ ಇಲಾಖೆ ಅವರ ಮೇಲೆ ಯಾವ ಕ್ರಮಗಳನ್ನು ಜರುಗಿಸಿದೆ ಎಂಬುವುದರ ಕುರಿತು ಇನ್ನೂ ಮಾಹಿತಿ ಹೊರ ಬಿದ್ದಿಲ್ಲ.