alex Certify ನಕಲಿ ಆರ್ ಎಂಡಿ ಗುಟ್ಕಾ ತಯಾರಿಕಾ ಘಟಕದ ಮೇಲೆ ದಾಳಿ: 7 ಆರೋಪಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ಆರ್ ಎಂಡಿ ಗುಟ್ಕಾ ತಯಾರಿಕಾ ಘಟಕದ ಮೇಲೆ ದಾಳಿ: 7 ಆರೋಪಿಗಳು ಅರೆಸ್ಟ್

ಬಾಗಲಕೋಟೆ: ನಕಲಿ ಆರ್ ಎಂಡಿ ಗುಟ್ಕಾ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಂತೇಶ್ ಮೂಲಿಮನಿ ಎಂಬುವವರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ನಕಲಿ ಆರ್ ಎಂಡಿ ಪಾನ್ ಮಸಾಲಾ, ಎಂ ಗೋಲ್ಡ್ ಸೆಂಟೆಡ್ ಟೊಬ್ಯಾಕೊ ಹೆಸರಿನ ಪೌಚ್ ಸೇರಿದಂತೆ 30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಮಹಮ್ಮದ್ ವಶೀಮ್ ಮುನೀರ, ಹಿಮಾಯತ, ಮಹಮ್ಮದ್, ವಿಕಾಸ್ ಚವ್ಹಾಣ್, ಸಂತೋಷ್ ಬಳ್ಳೊಳ್ಳೆ, ಜಹೀರ, ಇಕ್ವಾಲ್ ಬಂಧಿತ ಆರೋಪಿಗಳು. ಬಂಧಿತರು ಬೆಳಗಾವಿ, ನಿಪ್ಪಾಣಿ ಹಾಗೂ ಹೈದರಾಬಾದ್ ಮೂಲದವರು ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...