ನವದೆಹಲಿ: ಕೊರೋನಾ ನಕಲಿ ಔಷಧ ಮಾರಾಟವಾಗುತ್ತಿದ್ದು, ಇದರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಪ್ರಸ್ತುತ ದೇಶದಲ್ಲಿ ಕೊರೋನಾ ಎರಡನೇ ಭಾರಿ ಆತಂಕವನ್ನುಂಟು ಮಾಡಿದೆ. ಸಾವಿನ ಸಂಖ್ಯೆ ಕೂಡ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಸೋಂಕಿಗೆ ಮನೆ ಮದ್ದು ಎಂದು ಶಿಫಾರಸು ಮಾಡಲಾದ ನಕಲಿ ವರದಿಯೊಂದು ವೈರಲ್ ಆಗುತ್ತಿದೆ.
ವಿಶ್ವ ಸಂಸ್ಥೆಯ ಪ್ರಕಾರ ಕೊರೊನಾ ಸೋಂಕು ತಡೆಗೆ ಶುಂಠಿ, ಕಾಳುಮೆಣಸು, ಜೇನುತುಪ್ಪ ಸೇವಿಸಬೇಕೆಂಬ ರಿಪೋರ್ಟ್ ಹರಿದಾಡುತ್ತಿದ್ದು, ಇದರ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಸರ್ಕಾರ ಮತ್ತು ಸೂಕ್ತ ಅಧಿಕಾರಿಗಳು, ತಜ್ಞರು ನೀಡಿದ ಸೂಚನೆಗಳನ್ನು ಮಾತ್ರ ನಂಬಬೇಕೆಂದು ತಿಳಿಸಲಾಗಿದೆ. ಈ ರೀತಿಯ ವದಂತಿಗಳನ್ನು ನಂಬಿ ಪ್ರಯೋಗ ಮಾಡಿದರೆ ಆರೋಗ್ಯಕ್ಕೆ ಹಾನಿ ಸಂಭವಿಸುತ್ತದೆ. ಹಾಗಾಗಿ ಎಚ್ಚರಿಕೆ ವಹಿಸಬೇಕೆಂದು ತಿಳಿಸಲಾಗಿದೆ.
ಪುದುಚೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿಶ್ವ ಆರೋಗ್ಯ ಸಂಸ್ಥೆಯ ಹೆಸರಲ್ಲಿ ನಕಲಿ ಸುದ್ದಿ ವೈರಲ್ ಆಗಿರುವ ಬಗ್ಗೆ ಹಲವರ ಗಮನಕ್ಕೆ ತಂದಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ನಕಲಿ ಔಷಧ ಮಾರಾಟ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.