ನವದೆಹಲಿ: ದೆಹಲಿ ಪೊಲೀಸರು ಗುರುವಾರ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಉತ್ತರಾಖಂಡ್ ನ ಕೊಟ್ ದ್ವಾರ್ ಪ್ರದೇಶದಲ್ಲಿ ನಕಲಿ ರೆಮ್ ಡೆಸಿವಿರ್ ಚುಚ್ಚುಮದ್ದು ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ. 196 ನಕಲಿ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ವಶಪಡಿಸಿಕೊಂಡಿದ್ದು ಐವರನ್ನು ಬಂಧಿಸಲಾಗಿದೆ. ಬಂಧಿತರು ಈಗಾಗಲೇ 2000 ನಕಲಿ ರೆಮ್ ಡೆಸಿವಿರ್ ಚುಚ್ಚುಮದ್ದು ಮಾರಾಟ ಮಾಡಿದ್ದಾರೆ.
ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೆಹಲಿ ಪೊಲೀಸರು ನಕಲಿ ರೆಮ್ ಡೆಸಿವಿರ್ ಬಗ್ಗೆ ತನಿಖೆ ಕೈಗೊಂಡಿದ್ದು, ಉತ್ತರಾಖಂಡ್ ನಲ್ಲಿ ಔಷಧೀಯ ಘಟಕದ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ವೇಳೆ ಬಂಧಿಸಲಾದ ಆರೋಪಿಗಳು 25,000 ರೂ.ಗಿಂತ ಅಧಿಕ ಬೆಲೆಗೆ ನಕಲಿ ರೆಮ್ ಡೆಸಿವಿರ್ ಮಾರಾಟ ಮಾಡಿರುವುದು ಗೊತ್ತಾಗಿದೆ.
ಬೃಹತ್ ಪ್ರಮಾಣದಲ್ಲಿ ನಕಲಿ ರೆಮ್ ಡೆಸಿವಿರ್ ತಯಾರಿಸಿ ಮಾರಾಟ ಮಾಡಿದ್ದು, 196 ಪ್ಯಾಕಿಂಗ್ ಯಂತ್ರಗಳು, 3 ಸಾವಿರ ಖಾಲಿ ಬಾಟಲಿ ವಶಪಡಿಸಿಕೊಳ್ಳಲಾಗಿದೆ. ಇವರು ಈಗಾಗಲೇ 2000 ನಕಲಿ ರೆಮ್ ಡೆಸಿವಿರ್ ಮಾರಾಟ ಮಾಡಿದ್ದಾರೆ ಎಂದು ಗೊತ್ತಾಗಿದ್ದು, ತನಿಖೆ ಮುಂದುವರೆಸಲಾಗಿದೆ.