ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನ ವಶಪಡಿಸಿಕೊಳ್ಳುವಲ್ಲಿ ಮಧ್ಯ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ 8 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಆರು ಮಂದಿಯನ್ನ ಮಧ್ಯ ಪ್ರದೇಶದ ಬಾಲಾಘಾಟ್ನಲ್ಲಿ ಬಂಧಿಸಲಾಗಿದ್ದರೆ, ಉಳಿದ ಇಬ್ಬರನ್ನ ಮಹಾರಾಷ್ಟ್ರದ ಗೋಂದಿಯಾ ಎಂಬಲ್ಲಿ ಸೆರೆಹಿಡಿಯಲಾಗಿದೆ ಎಂದು ಬಾಲಾಘಾಟ್ ಹಿರಿಯ ಪೊಲೀಸ್ ಅಧಿಕಾರಿ ಅಭಿಷೇಕ್ ತಿವಾರಿ ಮಾಹಿತಿ ನೀಡಿದ್ರು.
10 ರೂಪಾಯಿಯಿಂದ 2000 ರೂಪಾಯಿ ಮುಖ ಬೆಲೆವರೆಗಿನ ನೋಟುಗಳನ್ನ ವಶಪಡಿಸಿಕೊಳ್ಳಲಾಗಿದೆ. ನಕಲಿ ನೋಟುಗಳ ಜಾಲದ ಸಂಬಂಧ ಸಿಕ್ಕ ಸೂಕ್ತ ಮಾಹಿತಿಯನ್ನ ಆಧರಿಸಿ ದಾಳಿ ನಡೆಸಲಾಗಿದೆ. ಬೈಹಾರ್ ಹಾಗೂ ಬಾಲಾಘಾಟ್ನಲ್ಲಿ ನಕಲಿ ನೋಟುಗಳ ಹಾವಳಿ ಮಿತಿಮೀರ್ತಿದೆ ಎಂದು ತಿವಾರಿ ಕಳವಳ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಆಪರೇಷನ್ನಲ್ಲಿ ಪೊಲೀಸರು 8 ಮಂದಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ.