ಬೆಂಗಳೂರು : ಸುಳ್ಳು ಸುದ್ದಿಗಳಿಗೆ ಇನ್ಮುಂದೆ ಬ್ರೇಕ್ ಬೀಳಲಿದ್ದು, ರಾಜ್ಯ ಸರ್ಕಾರ ಖಡಕ್ ಆದೇಶವೊಂದನ್ನು ಇನ್ನೆರಡು ದಿನಗಳಲ್ಲಿ ಹೊರಡಿಸಲಿದೆ.
ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಿದ್ದು, ಸುಳ್ಳು ಸುದ್ದಿ ಹರಡುವುದು, ಫೋಟೋ, ವಿಡಿಯೋ ತಿರುಚಿ ಬಿತ್ತರಿಸುವುದು ಸೇರಿದಂತೆ ವಿವಿಧ ರೀತಿಯ ಸೈಬರ್ ಕ್ರೈಂ ಪ್ರಕರಣಗಳಿಗೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಇನ್ನೆರಡು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.