alex Certify BIG NEWS : ಸುಳ್ಳು ಸುದ್ದಿಗಳಿಗೆ ಇನ್ಮುಂದೆ ಬೀಳಲಿದೆ ಬ್ರೇಕ್ ; ರಾಜ್ಯ ಸರ್ಕಾರದಿಂದ ಸತ್ಯ ತಪಾಸಣಾ ತಂಡ ರಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಸುಳ್ಳು ಸುದ್ದಿಗಳಿಗೆ ಇನ್ಮುಂದೆ ಬೀಳಲಿದೆ ಬ್ರೇಕ್ ; ರಾಜ್ಯ ಸರ್ಕಾರದಿಂದ ಸತ್ಯ ತಪಾಸಣಾ ತಂಡ ರಚನೆ

ಬೆಂಗಳೂರು : ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ರಾಜ್ಯ ಸರ್ಕಾರ ಸತ್ಯ ತಪಾಸಣಾ ತಂಡ ರಚನೆ ಮಾಡಲಿದೆ.

ರಾಜ್ಯದ ಎಲ್ಲಾ ಜನತೆಯನ್ನು ಒಳಗೊಂಡ, ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕರ್ನಾಟಕ ನವನಿರ್ಮಾಣದ ಗ್ಯಾರಂಟಿ ಬಜೆಟ್ ಅನ್ನು ರಾಜ್ಯದ ಸಮಸ್ತ ಜನರಿಗೆ ಅರ್ಪಿಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ 2024-25ರ ರಾಜ್ಯ ಬಜೆಟ್ನಲ್ಲಿ ಶಾಂತಿ, ಸುವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ರಾಜ್ಯದಲ್ಲಿ ಸೈಬರ್ ಕ್ರೈಂ ವಿಭಾಗವನ್ನು ಬಲಪಡಿಸಲು ಒಟ್ಟು 43 ಸಿ.ಇ.ಎನ್. ಪೊಲೀಸ್ ಠಾಣೆಗಳ ಉನ್ನತೀಕರಣ. ಸುಳ್ಳುಸುದ್ದಿ ತಡೆಗೆ ಐ.ಟಿ.ಬಿ.ಟಿ ಇಲಾಖೆಯ ಸಹಯೋಗದಲ್ಲಿ ಸತ್ಯ ತಪಾಸಣಾ ತಂಡ ಹಾಗೂ ವಿಶೇಷ ಕೋಶ ರಚನೆ. ಶಿವಮೊಗ್ಗ ಜಿಲ್ಲೆಯಲ್ಲಿ 100 ಕೋಟಿ ರೂ. ವೆಚ್ಚದ ಹೈ-ಸೆಕ್ಯೂರಿಟಿ ಕಾರಾಗೃಹ ನಿರ್ಮಾಣ, ವಿಧಿ ವಿಜ್ಞಾನ ಪ್ರಯೋಗಾಲಯಗಳ ಬಲವರ್ಧನೆಗೆ 10 ಕೋಟಿ ರೂ ನೀಡಲಾಗುತ್ತದೆ ಎಂದು  ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...