
ಕಲಬುರಗಿ: ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಸೇವಕರ ಹುದ್ದೆ ಪಡೆಯಲು SSLC ಅಂಕ ಪಟ್ಟಿಯಲ್ಲಿನ ಅಂಕಗಳನ್ನು ತಿದ್ದಿ ನಕಲಿ ಪ್ರಮಾಣಪತ್ರ ಸಲ್ಲಿಸಿದ 25 ಅಭ್ಯರ್ಥಿಗಳು ವಿರುದ್ಧ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
2023ರ ಜುಲೈನಲ್ಲಿ ಗ್ರಾಮೀಣ ಅಂಚೆ ಸೇವಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಎಸ್.ಎಸ್.ಎಲ್.ಸಿ. ಗರಿಷ್ಠ ವಿದ್ಯಾರ್ಹತೆ ನಿಗದಿಪಡಿಸಲಾಗಿತ್ತು. ಅಭ್ಯರ್ಥಿಗಳ ಅಂಕಪಟ್ಟಿ ನೈಜತೆ ಪರಿಶೀಲನೆಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ ವಿಭಾಗೀಯ ಕಚೇರಿಗೆ ಕಳುಹಿಸಲಾಗಿದ್ದು, 25 ಅಭ್ಯರ್ಥಿಗಳ ಅಂಕಪಟ್ಟಿ ನಕಲಿಯಾಗಿದೆ ಎಂದು ದೃಢಪಟ್ಟಿದೆ.
ನಕಲಿ ಪ್ರಮಾಣ ಪತ್ರ ಸಲ್ಲಿಸಿ ಅಂಚೆ ಇಲಾಖೆ ಮತ್ತು ಸರ್ಕಾರಕ್ಕೆ ವಂಚಿಸಿದ ಆರೋಪದ ಮೇಲೆ 25 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಲಬುರಗಿ ಜಿಲ್ಲೆಯ ಸಲೀಂ ಘನಿಸಾಬ್, ಪವಿತ್ರಾ, ಅಶೋಕ, ಮಹೇಂದ್ರ ಕುಮಾರ, ಈರಮ್ಮ, ಟಬು ಬೇಗಂ, ಶಿವಕುಮಾರ, ಸೂರ್ಯಕಾಂತ, ರಾಘವೇಂದ್ರ, ಕಮಲದಾಸ್, ನಾಮದೇವ, ಶ್ವೇತಾ, ಗೋಪಿಕೃಷ್ಣ, ಪಲ್ಲವಿ, ವೀರೇಶ, ರಾಹುಲ್, ಸಂಗಮೇಶ, ನಾಮು ಸುಭಾಷ, ರಾಹುಲ್, ಶಿವಪುತ್ರಪ್ಪ, ಅಶ್ವಿನಿ ಈರಣ್ಣ, ರೇಣುಕಾ, ಅನಿಲ ಕುಮಾರ್, ಬೀದರ್ ಜಿಲ್ಲೆಯ ಅಮರಲಿಂಗ, ತೋಟೇಶ್ವರಿ, ವೀರಭದ್ರಪ್ಪ, ಚಂದ್ರಕಾಂತ, ವಿಜಯಪುರದ ಗಂಗಮ್ಮ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.