alex Certify ನಕಲಿ ಇಎಸ್ ಐ ಕಾರ್ಡ್ ಸೃಷ್ಟಿಸಿ ವಂಚನೆ: ಸೆಕ್ಯೂರಿಟಿ ಗಾರ್ಡ್ ಸೇರಿ ಮೂವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ಇಎಸ್ ಐ ಕಾರ್ಡ್ ಸೃಷ್ಟಿಸಿ ವಂಚನೆ: ಸೆಕ್ಯೂರಿಟಿ ಗಾರ್ಡ್ ಸೇರಿ ಮೂವರು ಅರೆಸ್ಟ್

ಬೆಂಗಳೂರು: ನಕಲಿ ಇಎಸ್ ಐ, ಇ-ಪೆಹಚಾನ್ ಕಾರ್ಡ್ ಗಳನ್ನು ಮಾಡಿಸಿಕೊಟ್ಟು ದ್ಸರ್ಕಾರದ ಬೊಕಸಕ್ಕೆ ವಂಚಿಸುತ್ತಿದ್ದ ಇಎಸ್ ಐ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್ ಸೇರಿ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶ್ರೀಧರ್, ರಮೇಶ್, ಶಿವಗಂಗಾ, ಶ್ವೇತಾ, ಆಡಿಟರ್ ಶಶಿಕಲಾ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಸ್ತಿತ್ವದಲ್ಲಿ ಇರದ ಕಂಪನಿಗಳನ್ನು ಸೃಷ್ಟಿಸಿ, ಸಾರ್ವಜನಿಕರು, ರೋಗಿಗಳಿಇಂದ ಹಣ ಪಡೆದು ಆ ನಕಲಿ ಕಂಪನಿಗ್ಳಿಗೆ ಅವರನ್ನು ನೌಕರರೆಂದು ತೋರಿಸಿ ಇಇಎಸ್ ಐ ಕಾರ್ಡ್ ಕೊಡುತ್ತಿದ್ದರು. ಪ್ರತಿಯಾಗಿ ಅವರಿಂದ 10 ಸಾವಿರದಿಂದ 2 ಲಕ್ಷದವರೆಗೆ ಹಣ ಪಡೆಯುತ್ತಿದ್ದರು. ಬಳಿಕ ಆ ಕಾರ್ಡುಗಳಿಗೆ ಸರ್ಕಾರಕ್ಕೆ ಪಾವತಿಸಬೇಕಿರುವ ಹಣವೆಂದು ಪ್ರತಿ ತಿಂಗಳು 500 ರೂ ಪಡೆದುಕೊಳ್ಳುತ್ತಿದ್ದರು. ಈ ಮೂಲಕ ಅನರ್ಹರಿಗೂ ಇಎಸ್ ಐ ಕಾರ್ಡ್ ಮೂಲಕ ಚಿಕಿತ್ಸೆ ಸಿಗುವಂತೆ ಮ್ಡಿ ವಂಚಿಸುತ್ತಿದ್ದರು.

ಐಎಸ್ ಐ ಕಾರ್ಡ್ ಗಳಲ್ಲಿ ಅಕ್ರಮ ಎಂದು ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾನ್ಯತೆ ಪಡೆದಿರುವ ಕಾರ್ಖಾನೆ ಅಥವಾ ಕಂಪನಿಗಳಲ್ಲಿ ಮಾಸಿಕ 21,000ಕ್ಕಿಂತ ಕಡಿಮೆ ವೇತನ ಪಡೆಯುವ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗಾಗಿ ಇಎಸ್ ಐ ಯೋಜನೆ ಜಾರಿಯಲ್ಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...