
ಹಾವೇರಿ: ಸುಳ್ಳು ದಾಖಲಾತಿ ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದ ಮತ್ತು ಆಕೆಗೆ ನೆರವಾಗಿದ್ದ ಮುಖ್ಯ ಶಿಕ್ಷಕನಿಗೆ 7 ವರ್ಷ ಕಾರಾಗೃಹ ಶಿಕ್ಷೆ, 37 ಸಾವಿರ ರೂಪಾಯಿ ದಂಡ ವಿಧಿಸಿ ಹಾವೇರಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
2010ರಲ್ಲಿ ನಡೆದ ಗುತ್ತಲ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದ ಮುಕ್ತಾಬಾಯಿ ಚುನಾಯಿತರಾಗಿದ್ದರು. ಮುಖ್ಯ ಶಿಕ್ಷಕ ಮಾರುತಿ ಹನುಮಂತಪ್ಪ ಅವರಿಗೆ ನೆರವಾಗಿದ್ದರು. ಮುಕ್ತಾಬಾಯಿ ಪ್ರವರ್ಗ 1 ಗೊಂದಳಿ ಜಾತಿಗೆ ಸೇರಿದ್ದರು. ಕಳಕಪ್ಪ ತಳವಾರ, ಮಾರುತಿ ಹನುಮಂತಪ್ಪ ಅವರ ಸಹಾಯ ಪಡೆದು ಸುಳ್ಳು ವ್ಯಾಸಂಗ ಪ್ರಮಾಣ ಪತ್ರ ಸೇರಿ ಇತರೆ ದಾಖಲಾತಿ ಸೃಷ್ಟಿಸಿದ್ದರು.
ಅವರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅಂದಿನ ತಹಶೀಲ್ದಾರ್ ಮುಕ್ತಾಬಾಯಿ ಗ್ರಾಪಂ ಸದಸ್ಯತ್ವ ರದ್ದು ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ 37 ಸಾವಿರ ರೂ. ದಂಡ ವಿಧಿಸಿದೆ.