
ಬೆಂಗಳೂರು: ನಕಲಿ ಮರಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಸಲು ಸಂಚು ರೂಪಿಸಿದ್ದ ಸಬ್ ರಿಜಿಸ್ಟ್ರಾರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಆರ್. ನಗರ ಜನನ ಮರಣ ಸಬ್ ರಿಜಿಸ್ಟ್ರಾರ್ ನವೀನ್, ಪುಟ್ಟಮ್ಮ, ಪ್ರಸಾದ್, ದಿವ್ಯಾ ಅವರನ್ನು ಬಂಧಿಸಲಾಗಿದೆ. ಪುಟ್ಟಮ್ಮ ಪುತ್ರರಾದ ಜನಾರ್ಧನ್ ಮತ್ತು ಅಕ್ಷಿತ್ ವಿರುದ್ಧವೂ ಕೇಸು ದಾಖಲಾಗಿದೆ. ಒಟ್ಟು ಆರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸಬ್ ರಿಜಿಸ್ಟ್ರಾರ್ ನವೀನ್ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಆರ್.ಆರ್. ನಗರದ ಸಮೀಪ ಪಟ್ಟಣಗೆರೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 3 ಎಕರೆ ಖಾಸಗಿ ಜಮೀನು ಕಬಳಿಕೆಗೆ ಮುಂದಾಗಿದ್ದರು. ಪುಟ್ಟಮ್ಮ, ಪ್ರಸಾದ್ ಎಂ.ಎಸ್. ಮತ್ತು ದಿವ್ಯಾ ಎಂ.ಎಸ್. ಸಹೋದರರು ಕೃತ್ಯವೆಸಗಿದ್ದರು. ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳು ಆಸ್ತಿ ಕಬಳಿಸಿದ್ದರು. ಟ್ರನ್ಕೋ ಇನ್ ಫ್ರಾ ಲಿಮಿಟೆಡ್ ಕಂಪನಿ ಹೆಸರಲ್ಲಿ ವಂಚನೆ ಮಾಡಲಾಗಿತ್ತು. ಆರೋಪಿಗಳ ವಿರುದ್ಧ ವಿವಿಧ ಠಾಣೆಯಲ್ಲಿ ವಂಚನೆ ದೂರು ದಾಖಲಾಗಿತ್ತು ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.