ವೈದ್ಯನೊಬ್ಬ ಮಹಿಳೆಯರಿಗೆ ಅಕ್ರಮವಾಗಿ ಔಷಧಿ ನೀಡಿ ಗರ್ಭಪಾತ ಮಾಡಿಸುತ್ತಿದ್ದಾನೆ ಅನ್ನುವ ಮಾಹಿತಿ ಸಿಕ್ಕಿದ್ದೆ ತಡ, ಆರೋಗ್ಯ ಅಧಿಕಾರಿಗಳು ಹೌಹಾರಿ ಹೋಗಿದ್ದರು. ಈ ಸುದ್ದಿಯ ಜಾಡು ಹಿಡಿದುಕೊಂಡು ಹೋದ ಅಧಿಕಾರಿಗಳ ಕೈಗೆ ಸಿಕ್ಕಿದ್ದು ಡುಬ್ಲಿಕೇಟ್ ಡಾಕ್ಟರ್ ಅರೆಸ್ಟ್ ಮಾಡುವುದಕ್ಕೆ ದೌಡಾಯಿಸಿಕೊಂಡು ಹೋಗಿದ್ದಾರೆ. ವಿಪರ್ಯಾಸ ಏನಂದರೆ ಆರೋಗ್ಯ ಅಧಿಕಾರಿಗಳು ಬಂಧಿಸುವುದಕ್ಕೆ ಬರ್ತಿದ್ದಾರೆ ಅನ್ನೋ ಸುದ್ದಿ ತಿಳಿದಿದ್ದೇ ತಡ ಆ ಡುಪ್ಲಿಕೇಟ್ ಡಾಕ್ಟರ್ ಎಸ್ಕೆಪ್ ಆಗೋಗಿದ್ದಾನೆ.
ಈ ಘಟನೆ ಗುರುಗ್ರಾಮದ ಫರೀದಾಬಾದ್‌ನಲ್ಲಿ ನಡೆದಿದ್ದು, ಅಲ್ಲೇ ಇದ್ದ ಚಾಂದ್ಸಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೊಡುವ ನೆಪದಲ್ಲಿ ಮಹಿಳೆಯರಿಗೆ ಬ್ಯಾನ್ ಮಾಡಿರುವಂತ ಗರ್ಭಪಾತದ ಔಷಧಿಯನ್ನ ನೀಡುತ್ತಿದ್ದ. ಈ ಮಾಹಿತಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಮಾನ್‌ಸಿಂಗ್ ಅವರಿಗೆ ಸಿಕ್ಕಿತ್ತು. ತಕ್ಷಣವೇ ಕಾರ್ಯಕ್ಕಿಳಿದ ಈ ತಂಡ, ನಕಲಿ ರೋಗಿಗಳನ್ನ ಆ ವೈದ್ಯನ ಮುಂದೆ ಕಳುಹಿಸಿದ್ದಾನೆ. ಅಷ್ಟೆ ಅಲ್ಲ ವೈದ್ಯ ಹೇಗೆ ಚಿಕಿತ್ಸೆ ಕೊಡುತ್ತಾನೆ ಅನ್ನೊದೆಲ್ಲವನ್ನೂ ಹಿಡನ್ ಕ್ಯಾಮರಾ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಇದೆಲ್ಲ ಸಾಕ್ಷಿಗಳನ್ನ ಸಂಗ್ರಹಿಸಿ ಆ ನಕಲಿ ವೈದ್ಯನನ್ನ ಬಂಧಿಸಿದ್ದಾರೆ. ಆದರೆ ಆ ವೈದ್ಯನ ಆಸ್ಪತ್ರೆಯಲ್ಲಿ ಅಲ್ಲಿ ನೂರಾರು ಜನ ಸೇರಿದ್ದ ಕಾರಣ, ಆತ ಅವರ ಮಧ್ಯದಿಂದಲೇ, ಮೆಡಿಕಲ್ ಆಫೀಸರ್‌ಗಳ ಕಣ್ಣಪ್ಪಿಸಿ ಫೇಕ್ ಡಾಕ್ಟರ್ ಓಡಿ ಹೋಗಿದ್ದಾನೆ.