alex Certify ನಕಲಿ ಪರವಾನಿಗೆಯೊಂದಿಗೆ ವೃತ್ತಿ ಮಾಡುತ್ತಿದ್ದ ವೈದ್ಯನಿಗೆ ಬಿಗ್ ಶಾಕ್: 3 ವರ್ಷ ಸಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ಪರವಾನಿಗೆಯೊಂದಿಗೆ ವೃತ್ತಿ ಮಾಡುತ್ತಿದ್ದ ವೈದ್ಯನಿಗೆ ಬಿಗ್ ಶಾಕ್: 3 ವರ್ಷ ಸಜೆ

ಶಿವಮೊಗ್ಗ: ನಕಲಿ ಪರವಾನಿಗೆ ಸೃಷ್ಟಿಸಿಕೊಂಡು ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿ ಹಕೀಂ ಅಲಿಯಾಸ್ ಡಾ.ಅಮೀರ್ ಜಾನ್‍ಗೆ 2 ನೇ ಜೆಎಂಎಫ್‍ಸಿ ನ್ಯಾಯಾಲಯ 3 ವರ್ಷ ಕಾರಾಗೃಹ ವಾಸ ಸಜೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಶಿವಮೊಗ್ಗ ನಗರದ ದುರ್ಗಾಮೃತ ಲಾಡ್ಜ್ ನಂ.106 ರಲ್ಲಿ ಆರೋಪಿ ಯಾವುದೇ ಪರವಾನಿಗೆ ಹೊಂದದೇ ನಕಲಿ ಪರವಾನಿಗೆಯನ್ನು ಸೃಷ್ಟಿಸಿಕೊಂಡು ವೈದ್ಯ ವೃತ್ತಿ ನಡೆಸುತ್ತಿದ್ದು, ಸಾಕ್ಷಿಗಳೊಂದಿಗೆ ದಾಳಿ ನಡೆಸಿ ನಕಲಿ ವೈದ್ಯ ವೃತ್ತಿಗೆ ಬಳಸಿದ ಔಷಧಿಗಳು, ಬೋರ್ಡ್, ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಭಾರತ ದಂಡ ಸಂಹಿತೆಯ ಕಲಂ 465, 420 ರೀತ್ಯಾ ಆರೋಪವೆಸಗಿದ್ದಾನೆ ಎಂದು ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಶಿವಮೊಗ್ಗ ಮಾನ್ಯ 2ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಆರೋಪಿಗೆ ನ್ಯಾಯಾಧೀಶರಾದ ಎಸ್.ಆರ್.ಸನ್ಮತಿ ಅವರು ಐಪಿಸಿ ಕಲಂ 465 ಅಪರಾಧಕ್ಕೆ 1 ವರ್ಷ ಕಾರಾಗೃಹ ಸಜೆ ಮತ್ತು 5 ಸಾವಿರ ರೂ. ದಂಡ ಹಾಗೂ ಕಲಂ 420 ಅಪರಾಧಕ್ಕೆ 2 ವರ್ಷಗಳ ಕಾರಾಗೃಹ ಸಜೆ ಮತ್ತು 10 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಕೆ.ಕಿರಣ್‍ಕುಮಾರ್ ವಾದ ಮಂಡಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...