alex Certify ಬರೋಬ್ಬರಿ 7 ಕೋಟಿ ರೂ. ಮೌಲ್ಯದ ಖೋಟಾ ನೋಟು ವಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 7 ಕೋಟಿ ರೂ. ಮೌಲ್ಯದ ಖೋಟಾ ನೋಟು ವಶ

ಮುಂಬೈ ಪೊಲೀಸರು 7 ಜನರನ್ನು ಬಂಧಿಸಿ ಅವರಿಂದ 7 ಕೋಟಿ ರೂಪಾಯಿ ಮುಖಬೆಲೆಯ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ನೋಟುಗಳ ಮುದ್ರಣ ಮತ್ತು ವಿತರಣೆಯಲ್ಲಿ ತೊಡಗಿರುವ ಅಂತರರಾಜ್ಯ ಗ್ಯಾಂಗ್ ಬಗ್ಗೆ ಮಾಹಿತಿ ಪಡೆದ ಮುಂಬೈ ಅಪರಾಧ ವಿಭಾಗ ಘಟಕ-11ರ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಚೆಕ್ ಪೋಸ್ಟ್ ಗಳಲ್ಲಿ ಅಲರ್ಟ್ ಆದ ಪೊಲೀಸರು ಹಾದು ಹೋಗುವ ಪ್ರತಿಯೊಂದು ವಾಹನಗಳ ತಪಾಸಣೆಗೆ ಮುಂದಾಗಿದ್ದಾರೆ. ಜನವರಿ 25 ರಂದು ದಹಿಸರ್ ಉಪನಗರದ ಚೆಕ್ ಪೋಸ್ಟ್‌ನಲ್ಲಿ ಅನುಮಾನಸ್ಪದ ಕಾರನ್ನು ತಡೆದು ವಿಚಾರಿಸಿದಾಗ ಇವರೇ ಆ ಕಳ್ಳರು ಎಂದು ಖಚಿತವಾಗಿದೆ. ಕಾರಿನಲ್ಲಿದ್ದ 4 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಈ ಟೀಮ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ‌.

ಕಾರನ್ನು ಪರಿಶೀಲಿಸಿದಾಗ 5 ಕೋಟಿ ಮುಖಬೆಲೆಯ 250 ಕಟ್ಟುಗಳ ನಕಲಿ ನೋಟುಗಳ (2,000 ರೂ. ಮುಖಬೆಲೆ) ಬ್ಯಾಗ್ ಪತ್ತೆಯಾಗಿದೆ. ಕಾರಿನಲ್ಲಿದ್ದ ನಾಲ್ವರನ್ನ ವಿಚಾರಿಸಿದ ಪೊಲೀಸರಿಗೆ ಇವರ ಇನ್ನುಳಿದ ಮೂವರು ಸಹಾಯಕರ ಬಗ್ಗೆ ತಿಳಿದುಬಂದಿದೆ. ಖಚಿತ ಮಾಹಿತಿ ಪಡೆದ ನಂತರ ಪೊಲೀಸರ ತಂಡವೊಂದು ಅಂಧೇರಿಯಲ್ಲಿರುವ ಹೋಟೆಲ್‌ ಮೇಲೆ ದಾಳಿ ನಡೆಸಿ ಇತರ ಮೂವರನ್ನು ಬಂಧಿಸಿದೆ.‌ ಅವರಿಂದ 2 ಕೋಟಿ ರೂಪಾಯಿ ಮುಖಬೆಲೆಯ 100 ಕಟ್ಟುಗಳ ನಕಲಿ ನೋಟುಗಳನ್ನು ( 2,000 ರೂ. ಮುಖಬೆಲೆ)ವಶಪಡಿಸಿಕೊಂಡಿದ್ದಾರೆ.

ಇದಲ್ಲದೆ ಒಂದು ಲ್ಯಾಪ್‌ಟಾಪ್, ಏಳು ಮೊಬೈಲ್ ಫೋನ್‌ ಗಳು, 28,170 ರೂಪಾಯಿ ಅಸಲಿ ಕರೆನ್ಸಿ, ಆಧಾರ್ ಹಾಗೂ ಪ್ಯಾನ್ ಕಾರ್ಡ್‌ಗಳು, ಡ್ರೈವಿಂಗ್ ಲೈಸೆನ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ತಂಡವು ಹಲವು ದಿನಗಳಿಂದ ನಕಲಿ ನೋಟುಗಳನ್ನು ಮುದ್ರಿಸಿ ಹಂಚುವ ದಂಧೆ ನಡೆಸುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಸಂಗ್ರಾಮಸಿಂಗ್ ನಿಶಾಂದರ್ ತಿಳಿಸಿದ್ದಾರೆ. ಆರೋಪಿಗಳನ್ನು ಜನವರಿ 31ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...