alex Certify ಹಣ ಗಳಿಸಲು ಕ್ಯಾನ್ಸರ್‌ ರೋಗಿಯಂತೆ ಬಿಂಬಿಸಿಕೊಂಡ ಮಹಿಳೆ; ವಂಚಿಸಿದಾಕೆಗೆ ವಿಧಿಸಿದ ದಂಡವೆಷ್ಟು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಗಳಿಸಲು ಕ್ಯಾನ್ಸರ್‌ ರೋಗಿಯಂತೆ ಬಿಂಬಿಸಿಕೊಂಡ ಮಹಿಳೆ; ವಂಚಿಸಿದಾಕೆಗೆ ವಿಧಿಸಿದ ದಂಡವೆಷ್ಟು ಗೊತ್ತಾ ?

ಇತ್ತೀಚೆಗೆ ತುರ್ತಾಗಿ ನೆರವಿನ ಅವಶ್ಯಕತೆ ಇದೆ ಎಂದು ವಾಟ್ಸಪ್​, ಫೇಸ್​ ಬುಕ್​ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಕ್​ ಖಾತೆ ಸಹಿತ ಕೋರಿಕೆ ಬರುವುದನ್ನು ಕಂಡಿರಬಹುದು. ಇದರಲ್ಲಿ ಎಷ್ಟು ನೈಜ ಎಂಬುದೇ ಪ್ರಶ್ನೆ. ಜನರ ಮುಗ್ಧತೆ ದುರುಪಯೋಗವಾಗುವ ಸಾಧ್ಯತೆಯೂ ಇದೆ.

ಇಲ್ಲೊಂದು ಪ್ರಕರಣದಲ್ಲಿ ನಕಲಿ ಕ್ಯಾನ್ಸರ್​ ರೋಗಿ ಸಾರ್ವಜನಿಕರಿಂದ 45 ಸಾವಿರ ಪೌಂಡ್​ ವಸೂಲಿ ಮಾಡಿ ವಂಚಿಸಿದ್ದ ಪ್ರಕರಣ ಬಯಲಾಗಿದೆ. ತಾನು ಕ್ಯಾನ್ಸರ್​ಗೆ ತುತ್ತಾಗಿದ್ದೇನೆಂದು ನಟಿಸಿ ಹಿತೈಷಿಗಳನ್ನು ವಂಚಿಸಿದ ಬ್ರಿಟಿಷ್​ ಮಹಿಳೆಗೆ ಕೇವಲ ಐದು ಪೌಂಡ್​ಗಳನ್ನು ಹಿಂದಿರುಗಿಸುವ ಶಿಕ್ಷೆ ವಿಧಿಸಲಾಗಿದೆ.

44 ವರ್ಷದ ನಿಕೋಲ್​ ಎಲ್ಕಬ್ಬಾಸ್​, ಸ್ಪೇನ್​ನಲ್ಲಿ ಖಾಸಗಿ ಅಂಡಾಶಯದ ಕ್ಯಾನ್ಸರ್​ ಚಿಕಿತ್ಸೆಗಾಗಿ ಪಾವತಿಸಬೇಕಾದ ಕಥೆಯನ್ನು ಹೆಣೆದಳು. ಹಿತೈಷಿಗಳಿಂದ ಒಟ್ಟು 45 ಸಾವಿರ ಪೌಂಡ್​ಗಿಂತ ಹೆಚ್ಚು ವಸೂಲಿ ಮಾಡಿದಳು. ಬಳಿಕ ಗೇಮಿಂಗ್​, ವೆಕೇಶನ್​ ಟಿಕೆಟ್​ ಮತ್ತು ಊಟಕ್ಕೆಂದು ಆ ಹಣವನ್ನು ವೆಚ್ಚ ಮಾಡಿದಳು.

ಪ್ರಕರಣ ಬಯಲಾದ ನಂತರ ಆಕೆಗೆ ಮರುಪಾವತಿ ಮಾಡಲು ಸಂಪನ್ಮೂಲ ಇರಲಿಲ್ಲ. 700 ಮಂದಿ ವಂಚನೆಗೊಳಗಾದವರಿದ್ದು, ಅವರೆಲ್ಲರಿಗೂ ತಲಾ 5 ಪೌಂಡ್​ ನೀಡಬೇಕೆಂದು ಕೋರ್ಟ್​ ಆದೇಶಿಸಿದೆ. ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದ ನಂತರ ನಿಕೋಲ್​ಗೆ ಎರಡು ವರ್ಷ ಒಂಬತ್ತು ತಿಂಗಳ ಜೈಲು ಶಿಕ್ಷೆ ಸಹ ವಿಧಿಸಿದೆ.

13ನೇ ಅಂತಸ್ತಿನಿಂದ ಹಾರಿ 83 ವರ್ಷದ ವೃದ್ಧೆ ಆತ್ಮಹತ್ಯೆ

ಫಂಡ್​ ಸಂಗ್ರಹಣೆಯ ಪುಟದಲ್ಲಿ ಆಕೆಯ ತಾಯಿ ಡೆಲೋರೆಸ್​ ಹಣಕ್ಕಾಗಿ ಮನವಿ ಮಾಡಿದರು, ಆದರೆ ಆಕೆಯನ್ನು ಪರೀಕ್ಷಿಸಿದ್ದ ಆಂಕೊಲಾಜಿಸ್ಟ್​ಗೆ ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಾಗ ಪ್ರಕರಣ ಬಯಲಿಗೆ ಬಂದಿದೆ.

ಇಂತಹ ಕ್ರೌಡ್​ ಸೋರ್ಸಿಂಗ್ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಕೋವಿಡ್​ -19 ಏಕಾಏಕಿ ಉತ್ತುಂಗದಲ್ಲಿದ್ದಾಗ ಹೆಚ್ಚಿನ ಸಂಖ್ಯೆಯ ಜನರು ಕ್ರೌಡ್​ಸೋರ್ಸಿಂಗ್ ವೆಬ್​ಸೈಟ್​ಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅನೇಕರ ಕತೆಗಳು ಮಾಧ್ಯಮದಲ್ಲಿ ಬಂದಿವೆ.

ಈ ವೇದಿಕೆಯ ವಿಶ್ವಾಸಾರ್ಹತೆ ಬೆಳೆದಂತೆ, ಸುಳ್ಳು ಮತ್ತು ಅಪ್ರಾಮಾಣಿಕ ರೋಗಿಗಳ ಸಂಖ್ಯೆಯೂ ಹೆಚ್ಚಾಯಿತು. ಸೂಕ್ತ ದಾಖಲೆಗಳು ಇಲ್ಲದೆ ಮತ್ತು ಕಾಯಿಲೆ ಹೆಸರು ಪ್ರಸ್ತಾಪಿಸಿ ಬಹಳಷ್ಟು ಜನರು ಹಣ ಕೇಳುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...