ಹುಬ್ಬಳ್ಳಿ: ವಿವಿಧ ಬ್ಯಾಂಕ್ ಗಳಲ್ಲಿ ನಕಲಿ ಖಾತೆ ತೆರೆದು ಅವ್ಯವಹಾರ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಗಳಲ್ಲಿ ನಕಲಿ ಖಾತೆ ತೆರೆದು ಅವ್ಯವಹಾರ ನಡೆಸುತ್ತಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ದೆಹಲಿ ಮೂಲದ ನಿಖಿಲ್ ಕುಮಾರ್ ರೌನಿ, ಸಚಿನ್ ಬೋಲಾ, ಮುಂಬೈ ಮೂಲದ ನಿಗಮ್ ಎಂದು ಗುರುತಿಸಲಾಗಿದೆ.
ಬಂಧಿತ ಅರೋಪಿಗಳಲ್ಲಿ ಇಬ್ಬರು ಸಪಹ್ಟ್ ವೇರ್ ಇಂಜಿನಿಯರ್ ಗಳಾಗಿದ್ದು, ಓರ್ವ ಬಟ್ಟೆ ವ್ಯಾಪಾರಿಯಾಗಿದ್ದಾನೆ. ಕೋಡಿಂಗ್, ಡಿಕೋಡಿಂಗ್ ನಲ್ಲಿ ಎಕ್ಸ್ ಪರ್ಟ್ ಆಗಿದ್ದ ಇಬ್ಬರು ಕರ್ನಾಟಕ, ಮಹಾರಾಷ್ಟ್ರ ಸೇರಿ ವಿವಿಧೆಡೆ ಬ್ಯಾಂಕ್ ಗಳಲ್ಲಿಯೇ ವಂಚನೆ ನಡೆಸಿದ್ದಾರೆ. ಸರ್ಕಾರಿ, ಖಾಸಗಿ ಬ್ಯಾಂಕ್ ಗಳಿಗ್ರ್ ಹಣ ವರ್ಗಾವಣೆ ಮಾಡಿಕೊಂಡು ಬಳಿಕ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು.
ವಂಚನೆ ಬಗ್ಗೆ ಹುಬ್ಬಳ್ಳಿ ಕ್ರೈಂ ಬ್ರ್ಯಾಂಚ್ ನಲ್ಲಿ ದೂರು ದಾಖಲಾಗಿತ್ತು. ಬ್ಯಾಂಕ್ ಖಾತೆ ವಿವರ, ವಿಳಾಸ, ಮೊಬೈಲ್ ಸಂಪರ್ಕದ ಜಾಡು ಹಿಡಿದ ಪೊಲೀಸರು ಇದೀಗ ಮೂವರನ್ನು ಬಂಧಿಸಿದ್ದಾರೆ.