ನೆಲಮಂಗಲ: ಸೇನಾಧಿಕಾರಿ ಎಂದು ವ್ಯಕ್ತಿಯೋರ್ವ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಫೋಟೋ ತೋರಿಸಿ ಭಾರತೀಯ ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಆರೋಪಿ, ವೈದ್ಯ ಮಹಿಳೆಯಿಂದ 95 ಸಾವಿರ ರೂಪಾಯಿ ಹಣ ಪಡೆದು ವಂಚಿಸಿದ್ದಾನೆ. ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಸೇನಾಧಿಕಾರಿ ಸತೀಶ್ ಎಂಬಾತ ತಾನು ಆರ್ಮಿ ಆಫೀಸರ್, 25 ಮಂದಿ ಮಹಿಳೆಯರನ್ನು ತಪಾಸಣೆಗೆ ಕಳುಹಿಸುತ್ತೇನೆ ಎಂದು ಹೇಳಿದ್ದ. ದಾಸರಹಳ್ಳಿಯ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞೆ ಡಾ.ಜ್ಯೋತಿ ಅವರನ್ನು ಇದೇ ರೀತಿ ನಂಬಿಸಿದ್ದ. ಆರ್ಮಿಯಿಂದ ಅಡ್ವಾನ್ಸ್ ಪೇ ಹಣ ಪಡೆಯುತ್ತಾರೆ ನಿಮ್ಮ ಯುಪಿಐ ಸ್ಕ್ಯಾನರ್ ಬಳಸಿ ಹಣ ಕಳುಹಿಸಿ ಎಂದು ಕೇಳಿದ್ದಾನೆ.
ವೈದ್ಯೆ ಯುಪಿಐ ಸ್ಕ್ಯಾನರ್ ಬಳಸುತ್ತಿದ್ದಂತೆ ತಕ್ಷಣ ಖಾತೆಯಿಂದ 95 ಸಾವಿರ ಹಣ ಡ್ರಾ ಆಗಿದೆ. ಆನ್ ಲೈನ್ ಮೂಲಕ ಕ್ಷಣಾರ್ಧದಲ್ಲಿ 95 ಸಾವಿರ ರೂಪಾಯಿ ಹಣ ಎಗರಿಸಿದ್ದಾನೆ ಖತರ್ನಾಕ್ ಕಳ್ಳ.
ಈ ಬಗ್ಗೆ ಬಾಗಲಗುಂಟೆ ಠಾಣೆಯಲ್ಲಿ ಡಾ.ಜ್ಯೋತಿ ದೂರು ದಾಖಲಿಸಿದ್ದಾರೆ.