ಬೆಂಗಳೂರು: ಗೆಳತಿಗಾಗಿ ಏರ್ ಪೋರ್ಟ್ ಟಿಕೆಟ್ ನಕಲಿ ಮಾಡಿದ್ದ ಯುವಕನನ್ನು ಏರ್ ಪೋರ್ಟ್ ಅಧಿಕಾರಿಗಳು ಬಂಧಿಸಿರುವ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಗೆಳತಿಯನ್ನು ವಿಮಾನದಲ್ಲಿ ಕಳುಹಿಸಿ ವಾಪಾಸ್ ಬರುವಾಗ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಏರ್ ಪೋರ್ಟ್ ಅಧಿಕಾರಿಗಳಿಗೆ ಯಾಮಾರಿಸಿ ಟರ್ಮಿನಲ್ ಪ್ರವೇಶ ಮಾಡಿದ್ದ.
ಗೆಳತಿ ಸುಸಂಸ್ಕೃತಿಯನ್ನು ದಹಲಿಗೆ ಕಳುಹಿಸಲು ಏರ್ ಪೋರ್ಟ್ ಗೆ ಬಂದಿದ್ದ ಯುವಕ ಪ್ರಕಾಶ್ ನಕಲಿ ಟಿಕೆಟ್ ಮಾಡಿಕೊಂಡು ಏರ್ ಪೋರ್ಟ್ ಟರ್ಮಿನಲ್ಲಿ ಪ್ರವೇಶಿಸಿದ್ದ. ಗೆಳತಿ ಕಳುಹಿಸಿ ವಾಪಾಸ್ ಬರುವಾಗ ಏರ್ ಪೋರ್ಟ್ ಅಧಿಕಾರಿಗಳು ಯುವಕನನ್ನು ಬಂಧಿಸಿದ್ದಾರೆ.