alex Certify ಹಬ್ಬಕ್ಕೆ ಊರಿಗೆ ಟಿಕೆಟ್​ ಸಿಗದೇ ಕಾರ್ಮಿಕನ ದುಃಖ; ಈತನ ಹಾಡಾಯ್ತು ಭಾರಿ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬಕ್ಕೆ ಊರಿಗೆ ಟಿಕೆಟ್​ ಸಿಗದೇ ಕಾರ್ಮಿಕನ ದುಃಖ; ಈತನ ಹಾಡಾಯ್ತು ಭಾರಿ ವೈರಲ್

ನಾಲ್ಕು ದಿನಗಳ ಛತ್ ಪೂಜಾ ಹಬ್ಬವನ್ನು ಉತ್ತರ ಭಾರತದ ಹಲವು ಕಡೆಗಳಲ್ಲಿ ಆಚರಿಸಲಾಗುತ್ತದೆ. ಹೆಚ್ಚಾಗಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಆಚರಿಸಲಾಗುವ ಹಬ್ಬ ಇದಾಗಿದೆ.

ಈ ಹಬ್ಬವನ್ನು ಸೂರ್ಯ ದೇವರು (ಸೂರ್ಯ ದೇವ್) ಮತ್ತು ಛತ್ತಿ (ಷಷ್ಟಿ) ದೇವಿ ಅಥವಾ ಮೈಯಾ (ತಾಯಿ)ಗೆ ಸಮರ್ಪಿಸಲಾಗಿದೆ. ಇದನ್ನು ವರ್ಷಕ್ಕೆ ಎರಡು ಬಾರಿ ಚೈತ್ರ ಮಾಸದಲ್ಲಿ (ಮಾರ್ಚ್-ಏಪ್ರಿಲ್) ಮತ್ತು ಇನ್ನೊಂದು ಹಿಂದೂ ಚಂದ್ರನ ಕ್ಯಾಲೆಂಡರ್‌ನ ಕಾರ್ತಿಕ ಮಾಸದಲ್ಲಿ (ಅಕ್ಟೋಬರ್-ನವೆಂಬರ್) ಆಚರಿಸಲಾಗುತ್ತದೆ.

ಆದರೆ ರಜೆ ಸಿಗದ ಕಾರಣ, ಹಲವರಿಗೆ ದೂರದ ಊರುಗಳಿಗೆ ಹೋಗುವುದು ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಹಲವರು ಹಲವು ರೀತಿಯಲ್ಲಿ ನೋವು ತೋಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಕಾರ್ಮಿಕ ದುಃಖ ತೋಡಿಕೊಂಡಿರುವ ಬಗೆ ಮಾತ್ರ ಈಗ ವೈರಲ್​ ಆಗಿದೆ.

ಹಬ್ಬದ ಸಮಯದಲ್ಲಿ ಬಸ್​, ರೈಲುಗಳು ಸಂಪೂರ್ಣ ರಶ್​ ಆಗುತ್ತವೆ, ಹಲವರು ಬಸ್​ಗಳನ್ನು ಐದಾರು ಪಟ್ಟು ರೇಟ್​ ಮಾಡುವ ಕಾರಣ, ತಿಂಗಳುಗಳ ಮೊದಲೇ ಜನರು ರೈಲಿಗೆ ಟಿಕೆಟ್​ ಬುಕ್​ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕಾರ್ಮಿಕ ಕೊನೆಯ ಕ್ಷಣದಲ್ಲಿ ರೈಲಿಗೆ ಹೋಗಲು ನೋಡಿದ ಕಾರಣ ಟಿಕೆಟ್​ ಸಿಗಲಿಲ್ಲ.

ಇದರಿಂದ ಹತಾಶನಾದ ಕಾರ್ಮಿಕ ಹಾಡಿನ ಮೂಲಕ ತನ್ನ ನೋವನ್ನು ತೋಡಿಕೊಂಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ನನ್ನ ಬಳಿ ರೈಲಿನ ಟಿಕೆಟ್​ ಇಲ್ಲ, ಮನೆಗೆ ಬರಲು ಆಗುವುದಿಲ್ಲ, ಮನೆಯಲ್ಲಿ ಛತ್​ಪೂಜೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಬೇಸರಿಸುವುದು ಬೇಡ ಅಮ್ಮ, ಈ ಸಮಯದಲ್ಲಿ ತಾನು ದುಡಿಯುವ ಹಣವನ್ನು ಗ್ರಾಮದಲ್ಲಿ ಮನೆ ಕಟ್ಟಲು ಬಳಸುತ್ತೇನೆ ಎನ್ನುವ ಅರ್ಥವುಳ್ಳ ಪದ್ಯವನ್ನು ನೋವಿನಿಂದ ಕಾರ್ಮಿಕ ನುಡಿದಿದ್ದಾನೆ.

ಈತನ ಹಾಡು ಅನೇಕರ ಹೃದಯವನ್ನು ಮುಟ್ಟಿದ್ದು, ವಿಡಿಯೋ ವೈರಲ್​ ಆಗಿದೆ. ವಿಶೇಷವಾಗಿ ಹಬ್ಬದ ಸಂದರ್ಭಗಳಲ್ಲಿ, ಸರ್ಕಾರವು ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಹೆಚ್ಚುವರಿ ರಜಾದಿನಗಳಿಗೆ ತೆರಳಬೇಕು ಎಂದು ಬಳಕೆದಾರರು ಉಲ್ಲೇಖಿಸಿದ್ದಾರೆ. ಈ ಕಾರ್ಮಿಕನಿಗೆ ಹಲವರು ಸಾಂತ್ವನ ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...