ನವದೆಹಲಿ: ನೂತನವಾಗಿ ಆಯ್ಕೆಯಾದ ಸಂಸದೆ ಮತ್ತು ನಟಿ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಕಾನ್ಸ್ಟೇಬಲ್ ಕಪಾಳಮೋಕ್ಷ ಮಾಡಿದ ಘಟನೆ ಗುರುವಾರ ನಡೆದಿದೆ.
ಈ ಘಟನೆ ಬಳಿಕ ಕಂಗನಾ ರನೌತ್ ಫೋಟೋವೊಂದು ಭಾರಿ ವೈರಲ್ ಆಗಿದೆ. ಕಂಗನಾ ರನೌತ್ ಮೇಲೆ ಕೆನ್ನೆ ಮೇಲೆ ಮಾರ್ಕ್ ಇದ್ದು, ಕಪಾಳ ಮೋಕ್ಷ ಮಾಡಿದ್ದರಿಂದ ಕೆನ್ನೆ ಮೇಲೆ ಗುರುತು ಮೂಡಿದೆ ಎಂದು ಹೇಳಲಾಗಿದ್ದು, ಫೋಟೋ ವೈರಲ್ ಆಗುತ್ತಿದೆ.
ಆದರೆ ಇದು ಸುಳ್ಳು. ಅವರ ಕೆನ್ನೆ ಮೇಲೆ ಮೂಡಿರುವ ಗುರುತು ಕಪಾಳ ಮೋಕ್ಷದ ಗುರುತಲ್ಲ. ಸೊಳ್ಳೆ ನಿರೋಧಕ ಸ್ಪ್ರೇ ಜಾಹೀರಾತಿನ ಹಳೆಯ ಫೋಟೋವನ್ನು ಕಂಗನಾ ರನೌತ್ ಕಪಾಳಮೋಕ್ಷಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ
ಹಿಮಾಚಲ ಪ್ರದೇಶದ ಮಂಡಿಯಿಂದ 2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಕಂಗನಾ ರನೌತ್ ದೆಹಲಿಗೆ ವಿಮಾನ ಹತ್ತಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.ರೈತರ ಪ್ರತಿಭಟನೆಯ ಬಗ್ಗೆ ಕಂಗನಾ ರನೌತ್ ಅವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ, “ರೈತರಿಗೆ ಅಗೌರವ ತೋರಿದ್ದಕ್ಕಾಗಿ” ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಐಎಸ್ಎಫ್ ಕಾನ್ಸ್ಟೇಬಲ್ ನಟನಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.