
ಆಜ್ತಕ್ ಹಾಗೂ ಎಬಿಪಿ ನ್ಯೂಸ್ ಚಾನೆಲ್ಗಳನ್ನ ಹೆಸರನ್ನು ಬಳಸಿ ಈ ಸುದ್ದಿಯನ್ನು ಹರಡಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಸ್ಕ್ರೀನ್ಶಾಟ್ಗಳು ವ್ಯಾಪಕವಾಗಿ ವೈರಲ್ ಆಗಿವೆ.
ಸರ್ಕಾರದ ಫ್ಯಾಕ್ಟ್ ಚೆಕ್ ಆರ್ಮ್ ಪ್ರೆಸ್ ಇನ್ಫಾರ್ಮೇಷನ್ ಬ್ಯುರೋ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ದೃಢೀಕರಣ ನೀಡಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಪಿಐಬಿ, ಎ 1 ಭಾರತ್ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್ ಲಾಕ್ಡೌನ್ ಹಾಗೂ ಶಾಲೆಗಳನ್ನು ಬಂದ್ ಮಾಡುವ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದೆ. ಈ ಮಾಹಿತಿಯು ಸತ್ಯಕ್ಕೆ ದೂರವಾಗಿದೆ. ಹಾಗೂ ಇಂತಹ ತಪ್ಪು ಸಂದೇಶ ಸಾರುವ ವಿಡಿಯೋ ಹಾಗೂ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಳ್ಳದಂತೆ ಸೂಚನೆ ನೀಡಿದೆ.