ನೋಯ್ಡಾ: ಚೀನಾ ದೇಶದ ಡಾಕ್ಸಿಂಗ್ ವಿಮಾನ ನಿಲ್ದಾಣದ ಫೋಟೋ, ವಿಡಿಯೋವನ್ನು ನೋಯ್ಡಾ ವಿಮಾನ ನಿಲ್ದಾಣದ ಪ್ರಚಾರಕ್ಕಾಗಿ ಬಳಸಲಾಗಿದೆಯೇ ಎಂಬ ಬಗ್ಗೆ ಪ್ರಶ್ನೆ ಎದ್ದಿದೆ. ಇದೀಗ ಈ ಬಗ್ಗೆ ಫ್ಯಾಕ್ಟ್ ಚೆಕ್ ಹೊರಬಂದಿದೆ.
ಉತ್ತರ ಪ್ರದೇಶದ ಜೇವರ್‌ನಲ್ಲಿರುವ ಬಹು ಪ್ರಸಿದ್ಧವಾದ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 25ರ ಗುರುವಾರದಂದು ನೆರವೇರಿಸಿದ್ದಾರೆ. ಸುಮಾರು 1,300 ಹೆಕ್ಟೇರ್‌ಗಳಷ್ಟು ವಿಸ್ತಾರವಾದ ವಿಮಾನ ನಿಲ್ದಾಣವು ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣ ಎಂದು ಘೋಷಿಸಲ್ಪಟ್ಟಿದೆ. 2024 ರ ವೇಳೆಗೆ ವಿಮಾನ ನಿಲ್ದಾಣದ ಮೊದಲ ಹಂತ ಪೂರ್ಣಗೊಳ್ಳಲಿದೆ ಮತ್ತು ವರ್ಷಕ್ಕೆ ಸುಮಾರು 1.2 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ.
ವಿಮಾನ ನಿಲ್ದಾಣದ ಹಲವಾರು ಪ್ರಚಾರದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋಗಳು ವಿಮಾನ ನಿಲ್ದಾಣವು ಪೂರ್ಣಗೊಂಡ ನಂತರ ಹೇಗಿರುತ್ತದೆ ಎಂಬುದಾಗಿದೆ. ರಾಜಕೀಯ ನಾಯಕರು ಸೇರಿದಂತೆ ಹಲವಾರು ನಾಗರಿಕರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಇದು ನೋಯ್ಡಾ ವಿಮಾನ ನಿಲ್ದಾಣದ ಚಿತ್ರಣವಲ್ಲ ಎಂದು ಹೇಳಲಾಗಿದೆ.
ಗುಡ್ ನ್ಯೂಸ್: ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ಪ್ರಾರಂಭ
ಸತ್ಯ-ಪರಿಶೀಲನಾ ವೆಬ್‌ಸೈಟ್ ಆಲ್ಟ್‌ನ್ಯೂಸ್‌ನ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್, ಫಾಕ್ಸ್ ಪಾಸ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ನೋಯ್ಡಾ ವಿಮಾನ ನಿಲ್ದಾಣದ ಚಿತ್ರಾತ್ಮಕ ಪ್ರಾತಿನಿಧ್ಯದಲ್ಲಿ ತೋರಿಸಿರುವ ಸ್ಟಾರ್‌ಫಿಶ್ ವಿನ್ಯಾಸವು ಡಾಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಚಿತ್ರಣವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿಕೊಂಡು, ಚಲಾವಣೆಯಲ್ಲಿರುವ ಚಿತ್ರವು ಚೀನಾದ ಬೀಜಿಂಗ್ ನ ಡಾಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ ಎಂದು ಗೊತ್ತಾಗಿದೆ. ಇದನ್ನು ಇರಾಕಿನ ವಾಸ್ತುಶಿಲ್ಪಿ ಜಹಾ ಹದಿದ್ ವಿನ್ಯಾಸಗೊಳಿಸಿದ್ದಾರೆ. ವಿಮಾನ ನಿಲ್ದಾಣವನ್ನು ಸೆಪ್ಟೆಂಬರ್ 2019 ರಲ್ಲಿ ನಾಗರಿಕರಿಗೆ ತೆರೆಯಲಾಯಿತು.