ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ವೈರಲ್ ಆಗುವುದು ಸಾಮಾನ್ಯ. ಹೀಗೆ ನಿಮ್ಮ ಫೇಸ್ ಬುಕ್ ಐಡಿ ಸುಲಭವಾಗಿ ಬದಲಿಸಬಹುದೆಂಬ ಸುಳ್ಳು ಸುದ್ದಿ ಹರಿದಾಡಿದೆ.
“ಫೇಸ್ಬುಕ್ ಹೊಸ ಅಚ್ಚರಿ
ನೀವು ಕಾಮೆಂಟ್ ಗಳಲ್ಲಿ ಮೊದಲು @highlight(ಹೈಲೈಟ್) ಎಂದು ಬರೆದರೆ ಹೈಲೈಟ್ ನೀಲಿ ಬಣ್ಣಕ್ಕೆ ಬಂದರೆ ನಿಮ್ಮ ಐಡಿ ಪ್ರಬಲವಾಗಿದೆ. ಅದನ್ನು ಸುಲಭವಾಗಿ ಹ್ಯಾಕ್ ಮಾಡಲು ಸಾಧ್ಯವಿಲ್ಲ. ನೀಲಿ ಬಣ್ಣಕ್ಕೆ ತಿರುಗದಿದ್ದರೆ ಪ್ರೊಫೈಲ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಅರ್ಥ.”
ಇಂತಹದೊಂದು ಸಂದೇಶ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕರು ಈ ಸಂದೇಶ ನಂಬಿ ತಮ್ಮ ಪಾಸ್ವರ್ಡ್ ಬದಲಾವಣೆ ಮಾಡುತ್ತಿದ್ದಾರೆ. ಕಾಮೆಂಟ್ ಬಾಕ್ಸ್ ಗಳಲ್ಲಿ @highlight ಎಂದು ಬರೆದು ಪರಿಶೀಲಿಸತೊಡಗಿದ್ದಾರೆ. ಈ ಸಂದೇಶ ಹಂಚಿಕೊಳ್ಳತೊಡಗಿದ್ದಾರೆ.
ಆದರೆ ‘ಫ್ಯಾಕ್ಟ್ ಚೆಕ್’ ಪ್ರಕಾರ ಇದನ್ನು ನಂಬದಿರಿ. ಈ ಬರಹ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದಯವಿಟ್ಟು ಇದನ್ನುನಂಬದಿರಿ. ಈ ವೈರಲ್ ಬರಹ ಸುಳ್ಳು ಎಂದು ಹೇಳಲಾಗಿದೆ.