alex Certify ಕೆಟ್ಟು ನಿಂತ ರೈಲು ತಳ್ಳಿದ್ರಾ ಸೈನಿಕರು ? ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಟ್ಟು ನಿಂತ ರೈಲು ತಳ್ಳಿದ್ರಾ ಸೈನಿಕರು ? ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿ ಸಂಗತಿ

ಕೆಟ್ಟು ನಿಂತ ರೈಲನ್ನು ಸೈನಿಕರು ಸೇರಿದಂತೆ ಸಾರ್ವಜನಿಕರು ತಳ್ಳುತ್ತಿದ್ದಾರೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೋಮವಾರ ಜುಲೈ 10 ರಂದು ವೈರಲ್ ಆದ ವಿಡಿಯೋದಲ್ಲಿ ಸೈನಿಕರು, ಪೊಲೀಸ್ ತಂಡ, ರೈಲ್ವೆ ಸಿಬ್ಬಂದಿ, ಸ್ಥಳೀಯರು ಮತ್ತು ಪ್ರಯಾಣಿಕರು ರೈಲನ್ನು ಚಲಿಸುವಂತೆ ಮಾಡಲು ಹಳಿ ಮೇಲೆ ತಳ್ಳುತ್ತಿದ್ದರು.

ನೂರಾರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲೊಂದು ಹಠಾತ್ತಾಗಿ ನಿಂತಿತು ಮತ್ತು ಅದನ್ನು ಮರುಪ್ರಾರಂಭಿಸಲು ತಳ್ಳಲಾಯಿತು ಎಂಬ ಶೀರ್ಷಿಕೆಯೊಂದಿಗೆ ಹಲವಾರು ಮಾಧ್ಯಮಗಳು, ವಿರೋಧ ಪಕ್ಷದ ನಾಯಕರು ಮತ್ತು ಎಡಪಂಥೀಯ ಸದಸ್ಯರು ಟ್ವಿಟರ್‌ನಲ್ಲಿ ಈ ದೃಶ್ಯಗಳನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಆದರೆ ವೈರಲ್ ವಿಡಿಯೋದ ಅಸಲಿಯತ್ತು ಬೇರೆನೇ ಇದೆ. ರೈಲು ಕೆಟ್ಟುನಿಂತಿದ್ದಲ್ಲ, ಬದಲಾಗಿ ಬೇರೆ ಕಾರಣವಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡ್ತಿದ್ದಂತೆ ವಿಡಿಯೋ ಪ್ರಸಾರ ಮಾಡಿದ್ದ ಸುದ್ಧಿ ಸಂಸ್ಥೆಗಳು ತಮ್ಮ ಟ್ವೀಟ್ ಗಳನ್ನ ಡಿಲೀಟ್ ಮಾಡಿವೆ.

ಹಾಗಾದರೆ ವೈರಲ್ ವಿಡಿಯೋದ ಅಸಲಿಯತ್ತೇನು? ರೈಲನ್ನು ತಳ್ಳಲು ಕಾರಣವಾಗಿದ್ದೇನು ಎಂಬುದಕ್ಕೆ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ವೀಡಿಯೊಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ಸುಳ್ಳು ಮಾಹಿತಿಯನ್ನು ತಳ್ಳಿಹಾಕಿರುವ ದಕ್ಷಿಣ ಕೇಂದ್ರ ರೈಲ್ವೆ ಇಲಾಖೆ “ಇದು 07.07.23 ರಂದು Tr No 12703 (HWH-SC) ಬೆಂಕಿಯ ಘಟನೆಗೆ ಸಂಬಂಧಿಸಿದೆ. ಬೆಂಕಿ ಮತ್ತಷ್ಟು ಹರಡುವುದನ್ನು ತಪ್ಪಿಸಲು ಹಿಂಬದಿ ಕೋಚ್‌ಗಳನ್ನು ಬೇರ್ಪಡಿಸಲು ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಪ್ರಜ್ಞಾಪೂರ್ವಕ ನಿರ್ಧಾರದ ತೆಗೆದುಕೊಂಡ ಬಗೆಗಿನ ವೀಡಿಯೊ. ಇದು ಇಂಜಿನ್‌ನಿಂದ ಸಹಾಯಕ್ಕಾಗಿ ಕಾಯದೆ ತೆಗೆದುಕೊಂಡ ತುರ್ತು ಕ್ರಮವಾಗಿದೆ” ಎಂದು ಸ್ಪಷ್ಟನೆ ನೀಡಿದೆ.

ರೈಲ್ವೇ ಸಚಿವಾಲಯದ ಅಧಿಕೃತ ವಕ್ತಾರರು ಸಹ ಟ್ವೀಟ್‌ನಲ್ಲಿ ಸ್ಪಷ್ಟನೆ ನೀಡಿದ್ದು, “ಇದು ಜುಲೈ 7, 2023 ರಂದು ರೈಲು ಸಂಖ್ಯೆ 12703 (HWH-SC) ಬೆಂಕಿಯ ಘಟನೆಗೆ ಸಂಬಂಧಿಸಿದೆ. ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಹಿಂಬದಿ ಕೋಚ್‌ಗಳನ್ನು ಬೇರ್ಪಡಿಸಲು ಮತ್ತು ಬೆಂಕಿ ಮತ್ತಷ್ಟು ಹರಡುವುದನ್ನು ತಪ್ಪಿಸಲು ಕೈಜೋಡಿಸಿದರು. ತಕ್ಷಣ ಸ್ಪಂದಿಸಿದ್ದಕ್ಕಾಗಿ ಎಚ್ಚೆತ್ತ ಪೊಲೀಸ್ ಸಿಬ್ಬಂದಿಗೆ ನಮ್ಮ ಕೃತಜ್ಞತೆಗಳು” ಎಂದು ರೈಲ್ವೇ ವಕ್ತಾರರ ಟ್ವಿಟರ್ ಹ್ಯಾಂಡಲ್ ಪೋಸ್ಟ್ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...