ಟಿ –20 ವಿಶ್ವಕಪ್ ಮುಗಿಯುತ್ತಿದ್ದಂತೆ ವಿರಾಟ್ ಕೊಹ್ಲಿ ತಮ್ಮ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಜೊತೆ ಲಂಡನ್ ಗೆ ಹಾರಿದ್ದಾರೆ. ಲಂಡನ್ ನಲ್ಲಿ ಇಬ್ಬರು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದಾರೆ. ಈ ಮಧ್ಯೆ ಅನುಷ್ಕಾ, ವಿರಾಟ್ ಹಳೆ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಲಂಡನ್‌ನ ಇಸ್ಕಾನ್ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿರೋದನ್ನು ನೋಡ್ಬಹುದು.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ, ಇಸ್ಕಾನ್ ನಲ್ಲಿ ನಡೆದ ಕೀರ್ತನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಬಾನಿ ಕುಟುಂಬದ ಮದುವೆಯಲ್ಲಿ ಇಡೀ ಚಿತ್ರರಂಗ, ಸೆಲೆಬ್ರಿಟಿಗಳು ಬ್ಯುಸಿಯಾಗಿರುವಾಗ ವಿರಾಟ್ ಮತ್ತು ಅನುಷ್ಕಾ ಮಾತ್ರ ಲಂಡನ್ ನಲ್ಲಿದ್ದಾರೆ.
ಅನುಷ್ಕಾ ಹಾಗೂ ಕೊಹ್ಲಿ ಲಂಡನ್ ನಲ್ಲಿಯೇ ನೆಲೆ ನಿಲ್ಲಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅನುಷ್ಕಾ ಚಕ್ಡಾ ಎಕ್ಸ್‌ಪ್ರೆಸ್ ಚಿತ್ರದಲ್ಲಿ ನಟಿಸಿದ್ದು, ನಂತ್ರ ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ. ಟಿ-20 ವಿಶ್ವಕಪ್ ಕೆಲ ಪಂದ್ಯ ವೀಕ್ಷಣೆ ಮಾಡಿದ್ದ ಅನುಷ್ಕಾ ಭಾರತಕ್ಕೆ ಹಿಂತಿರುಗುವ ಬದಲು ಲಂಡನ್‌ಗೆ ಮರಳಿದ್ದರು. ಮಗನ ಜನನದ ನಂತರವೂ ಅನುಷ್ಕಾ ಮತ್ತು ವಿರಾಟ್ ಹಲವಾರು ತಿಂಗಳುಗಳ ಕಾಲ ಲಂಡನ್‌ನಲ್ಲಿಯೇ ಇದ್ದರು. ಶಾಶ್ವತವಾಗಿ ಈ ಜೋಡಿ ಅಲ್ಲಿಗೆ ಶಿಫ್ಟ್ ಆಗ್ತಾರೆ ಎನ್ನುವ ಸುದ್ದಿ ಇದೆ.