alex Certify ಫ್ಯಾಕ್ಟ್ ಚೆಕ್: ಇಲ್ಲಿದೆ ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದೆ ಎನ್ನಲಾಗುತ್ತಿರುವ ಶಿವಲಿಂಗದ ಫೋಟೋ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಯಾಕ್ಟ್ ಚೆಕ್: ಇಲ್ಲಿದೆ ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದೆ ಎನ್ನಲಾಗುತ್ತಿರುವ ಶಿವಲಿಂಗದ ಫೋಟೋ ಹಿಂದಿನ ಅಸಲಿ ಸತ್ಯ

ಈಗ ಎಲ್ಲೆಲ್ಲೂ ಜ್ಞಾನವಾಪಿ ಶಿವಲಿಂಗದ್ದೇ ಚರ್ಚೆ. ಈ ನಡುವೆ ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿತೆನ್ನಲಾದ ಶಿವಲಿಂಗದ ಫೋಟೋ ಒಂದು ವೈರಲ್ ಆಗಿದೆ. ಆದರೆ ಈ ಫೋಟೋದಲ್ಲಿರುವ ಶಿವಲಿಂಗ ಜ್ಞಾನವಾಪಿಯದ್ದಲ್ಲ. ಫೋಟೋದ ಫ್ಯಾಕ್ಟ್‌ ಚೆಕ್ ನಡೆದಿದ್ದು, ವಿಯೆಟ್ನಾಂನಲ್ಲಿ ಉತ್ಖನನ ಮಾಡಲಾದ 9ನೇ ಶತಮಾನದ ಶಿವಲಿಂಗವನ್ನು ಜ್ಞಾನವಾಪಿ ಮಸೀದಿಯಲ್ಲಿ ಪತ್ತೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಚಿತ್ರವನ್ನು ಶೇರ್ ಮಾಡುವಾಗ ಅನೇಕರು ಈ ಫೋಟೋವು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ನ್ಯಾಯಾಲಯದ ಸೂಚನೆಯಂತೆ ನಡೆದ ವಿಡಿಯೊಗ್ರಫಿ ಸಮೀಕ್ಷೆ ವೇಳೆ ಪತ್ತೆಯಾಗಿದೆ ಎಂದು ಬರೆದುಕೊಂಡಿದ್ದರು.

“ಮೊಘಲ್ ವಾಸ್ತುಶಿಲ್ಪ ಅದ್ಭುತ ! ಮೊಘಲರು ಯಾವಾಗಲೂ ನೆಲಮಾಳಿಗೆಯಲ್ಲಿ ಪುರಾತನ ಹಿಂದೂ ದೇವಾಲಯ ಮೊದಲು ನಿರ್ಮಿಸುತ್ತಿದ್ದರು” ಎಂದು ಒಬ್ಬರು ಈ ಫೋಟೋಗೆ ಶೀರ್ಷಿಕೆ ನೀಡಿದ್ದರು.

ಟಿವಿಎಸ್ ಐಕ್ಯೂಬ್ ಇ-ಸ್ಕೂಟರ್ ನಲ್ಲಿದೆ ಈ ಎಲ್ಲ ವಿಶೇಷತೆ

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ಈ ಹೇಳಿಕೆಯನ್ನು ಸುಳ್ಳು ಎಂದು ಕಂಡುಕೊಂಡಿದೆ. ವೈರಲ್ ಚಿತ್ರವು ವಾರಣಾಸಿಯ ಜ್ಞಾನವಾಪಿ ಮಸೀದಿಯದ್ದಲ್ಲ, ಭಾರತದ್ದೇ ಅಲ್ಲ. ಅದು ವಿಯೆಟ್ನಾಂನದ್ದು ಎಂದು ಖಚಿತಪಡಿಸಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವಿಯೆಟ್ನಾಂನಲ್ಲಿ ಮರಳುಗಲ್ಲಿನ ಶಿವಲಿಂಗವನ್ನು ಉತ್ಖನನ ಮಾಡಿತ್ತು. ವರದಿಯ ಪ್ರಕಾರ, ವಿಗ್ರಹವು 9 ನೇ ಶತಮಾನಕ್ಕೂ ಹಿಂದಿನದ್ದು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಬಹಳ ಹಿಂದೆಯೇ ಈ ಶಿವಲಿಂಗದ ಫೋಟೋಗಳನ್ನು ಟ್ವೀಟ್ ಮಾಡಿದ್ದು, ಸಂಶೋಧನಾ ತಂಡವನ್ನು ಶ್ಲಾಘಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...