ಪ್ರಸಾದ ಸ್ವೀಕರಿಸಿದ ಬಳಿಕ ಮಹಿಳೆಯನ್ನು ದರೋಡೆ ಮಾಡುವಂತೆ ತೋರುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಸತ್ಯಾಸತ್ಯತೆಯನ್ನು ʼಇಂಡಿಯಾ ಟುಡೆʼ ಫ್ಯಾಕ್ಟ್ ಚೆಕ್ ತಂಡ ಹೊರಗೆಡಹಿದೆ.
ಗ್ಯಾಂಗ್ ಒಂದು ನಿದ್ರೆಗೆ ಜಾರಿಸುವ ವಸ್ತು ಬೆರೆಸಿದ ತಿನಿಸನ್ನು ಪ್ರಸಾದವೆಂದು ಒಂಟಿ ಮಹಿಳೆಗೆ ಕೊಟ್ಟ ನಂತರ ದರೋಡೆ ಮಾಡುವ ಸಿಸಿ ಟಿವಿ ದೃಶ್ಯಗಳನ್ನು ತೋರಿಸುವ ವೀಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದೆ.
ವೀಡಿಯೊದಲ್ಲಿರುವಂತೆ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ಮಹಿಳೆಗೆ ಇಬ್ಬರು ಮಹಿಳೆಯರು ಮಾದಕವಸ್ತು ಇರುವ ಪ್ರಸಾದ ನೀಡುತ್ತಿರುವುದನ್ನು ನೋಡಬಹುದು. ಅದನ್ನು ತಿಂದ ನಂತರ ಆಕೆ ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಬಳಿಕ ಆ ಇಬ್ಬರು ಮಹಿಳೆಯರು ಮತ್ತು ವ್ಯಕ್ತಿಯ ಮೂಲಕ ದರೋಡೆ ಮಾಡುವುದು ಕಾಣಿಸುತ್ತದೆ.
ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಲವಾರು ಮಂದಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅಪರಿಚಿತರು ಏನುಕೊಟ್ಟರೂ ಸ್ವೀಕರಿಸಬೇಡಿ ಎಂದು ಎಚ್ಚರಿಸಿದ್ದಾರೆ. ಈ ಘಟನೆಯ ಸ್ಥಳ ತಿಳಿದಿಲ್ಲ ಎಂದೂ ಸಹ ಸಾಲು ಸೇರಿಸಿದ್ದಾರೆ.
ಈ ವಿಡಿಯೋ ಮೂಲ ಹುಡುಕಾಟ ನಡೆಸಿದಾಗ ಏಪ್ರಿಲ್ 9, 2022ರಂದು ಯೂಟ್ಯೂಬ್ ಚಾನಲ್‌ಗೆ ಅದೇ ವೀಡಿಯೊ ಅಪ್‌ಲೋಡ್ ಮಾಡಿರುವುದು ಕಾಣಿಸಿದೆ.
“ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು ! ಈ ಚಾನಲ್ ಸ್ಕ್ರಿಪ್ಟ್ ಮಾಡಿದ ಸ್ಕಿಟ್ ಹಾಸ್ಯಗಳು ವಿವಿಧ ಸಂದರ್ಭಗಳಲ್ಲಿ ಜನರಿಗೆ ಅರಿವು ಮೂಡಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಚಾನಲ್ ಸಾಮಾಜಿಕ ಜಾಗೃತಿ ವಿಡಿಯೊಗಳನ್ನು ತರುತ್ತದೆ. ಈ ಕಿರುಚಿತ್ರಗಳು ಮನರಂಜನಾ ಉದ್ದೇಶಗಳಿಗಾಗಿ ಮಾತ್ರ. ಎಂದು ಶೀರ್ಷಿಕೆ ಇದೆ.
ಹೀಗಾಗಿ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೊ ಕ್ಯಾಮರಾದಲ್ಲಿ ಸೆರೆಹಿಡಿಯಲಾದ ನೈಜ ಘಟನೆಯಲ್ಲ. ಬದಲಿಗೆ ಜಾಗೃತಿ ಮೂಡಿಸಲು ರಚಿಸಲಾದ ಸ್ಕ್ರಿಪ್ಟೆಡ್ ಕಂಟೆಂಟ್ ಆಗಿದೆ. ಅದಾಗ್ಯೂ ಅಪರಿಚಿತರು ಏನನ್ನಾದರೂ ತಿನ್ನಲು ನೀಡಿದರೆ ಅದನ್ನು ಸ್ವೀಕರಿಸದೆ ಇರುವುದು ಸೂಕ್ತ.
https://youtu.be/YnqBETOb2GA