ವರ್ಷದ ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಪಡೆದಿದೆ. ಅದರಲ್ಲೂ ಕೆಲವು ದಿನಗಳು ವಿಶೇಷವಾಗಿರುತ್ತವೆ. ಮದುವೆಗೆ ಸಂಬಂಧಿಸಿ ವಿಷಯಗಳಿಗೆ ಇಂದು ವಿಶೇಷ ದಿನವಾಗಿದೆ. ಇಂದು ವಿವಾಹ ಪಂಚಮಿ ಆಚರಿಸಲಾಗುತ್ತಿದೆ. ರಾಮ ಮತ್ತು ಸೀತೆ ಮದುವೆಯಾಗಿದ್ದು, ವಿವಾಹ ಪಂಚಮಿಯಂದು. ವಿವಾಹ ಪಂಚಮಿಯಂದು ಮದುವೆಯಾಗುವುದು ಶುಭಕರವೆಂದು ನಂಬಲಾಗಿದೆ.
ಆದ್ರೆ ಕೆಲವರು ವಿವಾಹ ಪಂಚಮಿಯಂದು ಮಗಳ ಮದುವೆ ಮಾಡುವುದಿಲ್ಲ. ಮದುವೆ ನಂತ್ರ ಸೀತೆ ಸಾಕಷ್ಟು ದುಃಖ ಅನುಭವಿಸಿದ್ದಳು. ಹಾಗಾಗಿ ವಿವಾಹ ಪಂಚಮಿಯಂದು ಮದುವೆ ಮಾಡಬಾರದು ಎಂಬ ನಂಬಿಕೆಯೂ ಇದೆ. ಅದೇನೇ ಇರಲಿ, ವಿವಾಹ ಪಂಚಮಿಯಂದು ಮಾಡುವ ಕೆಲ ಕೆಲಸಗಳಿಂದ ಶೀಘ್ರ ಮದುವೆ ಯೋಗ ಪ್ರಾಪ್ತಿಯಾಗಲಿದೆ.
ವಿವಾಹ ಪಂಚಮಿಯ ದಿನದಂದು ಶ್ರೀರಾಮ ಮತ್ತು ಸೀತೆಯ ವಿವಾಹವನ್ನು ಮಾಡಬೇಕು. ಬೆಳಿಗ್ಗೆ ಸ್ನಾನ ಮಾಡಿ ಶ್ರೀರಾಮ ವಿವಾಹದ ಪ್ರತಿಜ್ಞೆ ಮಾಡಬೇಕು. ನಂತರ ಶ್ರೀರಾಮ ಮತ್ತು ತಾಯಿ ಸೀತೆಯ ವಿವಾಹದ ಫೋಟೋ ಅಥವಾ ವಿಗ್ರಹವನ್ನು ಸ್ಥಾಪಿಸಬೇಕು. ತಿಲಕದ ನಂತರ, ಶ್ರೀರಾಮನಿಗೆ ಹಳದಿ ಬಟ್ಟೆಗಳನ್ನು ಮತ್ತು ತಾಯಿ ಸೀತೆಗೆ ಕೆಂಪು ಬಟ್ಟೆಗಳನ್ನು ಅರ್ಪಿಸಬೇಕು. ನಂತರ ಆರತಿ ಮಾಡಬೇಕು. ಸಿಹಿತಿಂಡಿಗಳನ್ನು ಅರ್ಪಿಸಿಬೇಕು. ಗಂಟು ಹಾಕಿದ ಬಟ್ಟೆಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು.
ಹೀಗೆ ಮಾಡುವುದರಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಮದುವೆಗೆ ಅಡ್ಡಿಯಾಗ್ತಿದ್ದರೆ, ವಿವಾಹ ಪಂಚಮಿಯಂದು ರಾಮ-ಸೀತೆಯ ಪೂಜೆ ಮಾಡಿ, ಪ್ರಾರ್ಥನೆ ಮಾಡಿದ್ರೆ ಬಯಕೆ ಈಡೇರುತ್ತದೆ. ರಾಮಚರಿತಮಾನಸವನ್ನು ಈ ದಿನ ಪಠಿಸಬೇಕು. ಓಂ ಜಾನಕಿ ವಲ್ಲಭಾಯೈ ನಮಃ ಎಂಬ ಮಂತ್ರವನ್ನು ಪಠಿಸುವುದರಿಂದ ಎಲ್ಲ ಆಸೆ ಈಡೇರುತ್ತದೆ.