ಫೇಸ್ ಬುಕ್ , ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯವಾದ ದಿನದಂದು ಟೆಲಿಗ್ರಾಂಗೆ 70 ಮಿಲಿಯನ್ ಹೊಸ ಬಳಕೆದಾರರು ಸೇರ್ಪಡೆಯಾಗಿದ್ದಾರೆ ಎಂದು ಟೆಲಿಗ್ರಾಂ ಸ್ಥಾಪಕ ಪಾವೆಲ್ ಡುರೊವ್ ಹೇಳಿದ್ದಾರೆ.
ಫೇಸ್ ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಂ ಸೇವೆಗಳಲ್ಲಿ 6 ಗಂಟೆಗಳ ಕಾಲ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಟೆಲಿಗ್ರಾಂಗೆ 70 ಮಿಲಿಯನ್ ಹೊಸ ಬಳಕೆದಾರರ ಸೇರ್ಪಡೆಯಾಗಿದೆ ಎಂದು ಹೇಳಿದ್ರು.
ಷೇರು ಮಾರುಕಟ್ಟೆಯ ʼಮುಹೂರ್ತ ಟ್ರೇಡಿಂಗ್ʼ ಎಂದರೇನು…? ದೀಪಾವಳಿಯ ಈ ಶುಭ ವೇಳೆಯಲ್ಲಿ ನಡೆಯಲಿದೆ ವಹಿವಾಟು
ಟೆಲಿಗ್ರಾಂ ಪ್ರತಿನಿತ್ಯದ ಗ್ರೋಥ್ ದರವನ್ನು ಮೀರಿದೆ. ನಾವು ಒಂದೇ ದಿನದಲ್ಲಿ 70 ಮಿಲಿಯನ್ ಇತರೆ ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ಸ್ವಾಗತಿಸಿದ್ದೇವೆ ಎಂದು ಡುರೋವ್ ತಮ್ಮ ಟೆಲಿಗ್ರಾಂ ಚಾನೆಲ್ನಲ್ಲಿ ಬರೆದುಕೊಂಡಿದ್ದಾರೆ.
ಬೇರೆ ಬೇರೆ ವೇದಿಕೆಗಳಲ್ಲಿ ದೋಷ ಕಂಡುಬಂದ ಬಳಿಕ 70 ಮಿಲಿಯನ್ ಬಳಕೆದಾರರು ಟೆಲಿಗ್ರಾಂ ಕಡೆಗೆ ಮುಖ ಮಾಡಿದರು. ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದ ಬಳಿಕವೂ ನಮ್ಮ ತಂಡ ಯಾವುದೇ ದೋಷವಿಲ್ಲದೇ ಕಾರ್ಯ ನಿರ್ವಹಿಸಿದೆ. ಈ ಮೂಲಕ ಈ ಅಭೂತಪೂರ್ವ ಬೆಳವಣಿಗೆಯನ್ನು ಸ್ವಾಗತಿಸಿದೆ. ಪ್ರಪಂಚದ ವಿವಿಧ ಭಾಗಗಳಿಂದ ಮಿಲಿಯನ್ಗಟ್ಟಲೇ ಬಳಕೆದಾರರು ಏಕಕಾಲದಲ್ಲಿ ಟೆಲಿಗ್ರಾಂಗೆ ಸೈನಪ್ ಆಗಿದ್ದಾರೆ ಎಂದು ಬರೆದಿದ್ದಾರೆ.
ರೈತರಿಗೆ ಬಂಪರ್: ಸಾರ್ವಕಾಲಿಕ ದಾಖಲೆ ಬರೆದ ಹತ್ತಿ ದರ, ಉತ್ತಮ ಬೆಲೆಯಿಂದ ಬೆಳೆಗಾರರಲ್ಲಿ ಹರ್ಷ
ಮಿಲಿಯನ್ಗಟ್ಟಲೇ ಜನರು ಏಕಕಾಲದಲ್ಲಿ ಟೆಲಿಗ್ರಾಂಗೆ ಸೈನಪ್ ಆಗಿದ್ದರುಂದ ಅಮೆರಿಕದಲ್ಲಿ ಬಹುಶಃ ಟೆಲಿಗ್ರಾಂ ಸೇವೆಯಲ್ಲಿ ಕೊಂಚ ವಿಳಂಬವಾಗಿದೆ ಎಂದು ಡುರೋವ್ ಹೇಳಿದ್ದಾರೆ.