
ಮಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ನಂತರ ಮಂಗಳೂರಿನಲ್ಲಿ ಪ್ರಚೋದನಕಾರಿ ಫೇಸ್ಬುಕ್ ಪೋಸ್ಟ್ ಹಾಕಲಾಗಿದೆ.
ಮಂಗಳೂರು ಮುಸ್ಲಿಂ ಫೇಸ್ಬುಕ್ ಪೇಜ್ ನಿಂದ ಪೋಸ್ಟ್ ಮಾಡಲಾಗಿದೆ. 2015 ರಲ್ಲಿ ಪ್ರವಾದಿಗೆ ನಿಂದನೆ ಮಾಡಿದ್ದರಿಂದ ಕೊಲೆಯಾಗಿದೆ. ಪ್ರವಾದಿ ನಿಂದಿಸಿದರೆ ಎಲ್ಲರಿಗೂ ಇದೇ ಸ್ಥಿತಿ ಎಂದು ಪೋಸ್ಟ್ ಹಾಕಲಾಗಿದೆ.
ಪ್ರಚೋದನಕಾರಿ ಫೇಸ್ಬುಕ್ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಮಂಗಳೂರು ಮುಸ್ಲಿಂ ಫೇಸ್ಬುಕ್ ಪೇಜ್ ವಿರುದ್ಧ ದೂರು ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣ ವಿಭಾಗದ ಹೆಚ್.ಸಿ. ದೂರು ನೀಡಿದ್ದು, ಪೊಲೀಸ್ ಕಾನ್ಸ್ಟೇಬಲ್ ದೂರು ಆಧರಿಸಿ ಸುಮೋಟೋ ಕೇಸ್ ದಾಖಲಿಸಲಾಗಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸರು ಕ್ರಮಕೈಗೊಂಡಿದ್ದಾರೆನ್ನಲಾಗಿದೆ.