alex Certify ಮಹಿಳೆಯರ ಫೋಟೋ, ಫೋನ್ ನಂಬರ್ ಸಹಿತ ಅಶ್ಲೀಲ ಪೋಸ್ಟ್; ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಫೋಟೋ, ಫೋನ್ ನಂಬರ್ ಸಹಿತ ಅಶ್ಲೀಲ ಪೋಸ್ಟ್; ಆರೋಪಿ ಅರೆಸ್ಟ್

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಿತ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಬರೆದು ಫೋಟೋ, ಫೋನ್ ನಂಬರ್ ಸಹಿತ ಪೋಸ್ಟ್ ಮಾಡುತ್ತಿದ್ದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

35 ವರ್ಷದ ಚಂದ್ರಶೇಖರ್ ಎಂದು ಹೇಳಲಾಗಿದೆ. ಚಂದ್ರಶೇಖರ್ ಪರಿಚಿತ ಮಹಿಳೆಯರ ಫೋಟೋ, ಅವರ ಮೊಬೈಲ್ ನಂಬರ್ ಗಳನ್ನು ಫೇಸ್ಬುಕ್ ಗೆ ಪೋಸ್ಟ್ ಮಾಡಿ ಅಶ್ಲೀಲವಾಗಿ ಬರೆಯುತ್ತಿದ್ದ. ತಾನು ಹೇಳಿದಂತೆ ಕೇಳದಿದ್ದರೆ ಫೇಸ್ಬುಕ್ ನಿಂದ ಫೋಟೋ ತೆಗೆಯುವುದಿಲ್ಲ ಎಂದು ಬೆದರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಈತನ ಕಿರುಕುಳದಿಂದ ನೊಂದ ಮಹಿಳೆಯೊಬ್ಬರು ಬಾಗಲಗುಂಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...