
ಕೊಪ್ಪ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಪಾಕಿಸ್ತಾನ ಪರವಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಯುವಕನನ್ನು ಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಸ್ಗರ್ ಕೊಪ್ಪ ಎನ್ನುವ ವ್ಯಕ್ತಿ ಫೇಸ್ಬುಕ್ ಖಾತೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಪೋಸ್ಟ್ ಹಾಕಿ.ದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಪೋಸ್ಟ್ ಹಾಕಿದ್ದಲ್ಲದೇ, ಬಜರಂಗದಳದ ವಿರುದ್ಧವೂ ಅವಾಚ್ಯ ಪದ ಬಳಕೆ ಮಾಡಿ ಪೋಸ್ಟ್ ಮಾಡಿದ್ದ. ನಂತರ ಈ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದ. ಆದರೆ ಡಿಲೀಟ್ ಆಗುವ ಮೊದಲು ಅವನ ಪೋಸ್ಟ್ ಗಳನ್ನು ಗಮನಿಸಿದ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೊಪ್ಪ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.