ಸಾಮಾಜಿಕ ಜಾಲತಾಣ ವೇದಿಕೆಯಾದ ಫೇಸ್ಬುಕ್ನಲ್ಲಿ ಕಪ್ಪು ವರ್ಣದ ಪುರುಷರನ್ನು ಸಸ್ತನಿ ವರ್ಗದ ಇತರೆ ಪ್ರಾಣಿಗಳು ಎಂದು ತಪ್ಪಾಗಿ ಭಾವಿಸಿದ ಬಳಿಕ ಎಫ್.ಬಿ. ಬಳಕೆದಾರರಿಗೆ ವಿಷಯಗಳನ್ನು ಶಿಫಾರಸು ಮಾಡುತ್ತಿದ್ದ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಿದೆ ಎಂದು ಮಾಹಿತಿ ನೀಡಿದೆ.
ಫೇಸ್ಬುಕ್ ವಕ್ತಾರ ಈ ವಿಚಾರವಾಗಿ ಮಾಹಿತಿ ನೀಡಿದ್ದು ಇದು ನಿಜಕ್ಕೂ ಕ್ಷಮಿಸಲಾಗದಂತಹ ಪ್ರಮಾದವಾಗಿದೆ. ಈ ರೀತಿ ತಪ್ಪಾಗಿ ಶಿಫಾರಸು ನೀಡಿದ ಸಾಫ್ಟ್ವೇರ್ನ್ನು ನಿಷ್ಕ್ರಿಯಗೊಳಿಸಿದ್ದೇವೆ ಎಂದು ಹೇಳಿದ್ರು.
ಈ ತಪ್ಪಾದ ಶಿಫಾರಸ್ಸು ಯಾರ್ಯಾರಿಗೆ ಕಂಡಿದೆಯೋ ಅವರ ಬಳಿ ಕ್ಷಮೆ ಯಾಚಿಸುವುದಾಗಿ ಫೇಸ್ಬುಕ್ ಶುಕ್ರವಾರ ಹೇಳಿದೆ.
ಬಳಕೆದಾರರಿಗೆ ವಿಡಿಯೋಗಳನ್ನು, ಫೋಟೋಗಳನ್ನು ಶಿಫಾರಸು ಮಾಡುವ ವೈಶಿಷ್ಟ್ಯವನ್ನೇ ಹಿಂಪಡೆದಿದ್ದೇವೆ. ಈ ರೀತಿಯ ದೋಷ ಹೇಗೆ ಉಂಟಾಯ್ತು ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೇ ಮುಂದೆ ಇಂತಹ ಪ್ರಮಾದ ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದೂ ಅಭಯ ನೀಡಿದೆ.
ನಾವು ಯಾವುದಾದರೂ ವಿಡಿಯೋಗಳನ್ನು ಫೇಸ್ಬುಕ್ನಲ್ಲಿ ವೀಕ್ಷಣೆ ಮಾಡಿದರೆ ಬಳಿಕ ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಶಿಫಾರಸು ಮಾಡುವ ವೈಶಿಷ್ಟ್ಯವನ್ನು ಫೇಸ್ಬುಕ್ ಹೊಂದಿದೆ. ಅದೇ ರೀತಿ ಕಪ್ಪು ಪುರುಷರನ್ನು ಒಳಗೊಂಡ ಬ್ರಿಟಿಷ್ ಟಾಬ್ಲ್ಯಾಯ್ಡ್ ವಿಡಿಯೋಗಳನ್ನ ನೋಡಿದ ಫೇಸ್ಬುಕ್ ಬಳಕೆದಾರರ ಬಳಿ ಸಸ್ತನಿಗಳ ವಿಡಿಯೋ ನೋಡಬಯಸುತ್ತೀರಾ ಎಂಬ ಶಿಫಾರಸು ಫೇಸ್ಬುಕ್ನಿಂದ ಕಾಣಸಿಕ್ಕಿದೆ ಎನ್ನಲಾಗಿದೆ.