ಕಳೆದ ವರ್ಷ ದೇಶಕ್ಕೆ ಬಂದು ಅಪ್ಪಳಿಸಿದ ಕೊರೊನಾ ಮಹಾಮಾರಿ ಎಲ್ಲ ವರ್ಗದ ಜನರ ಬದುಕನ್ನು ಕಂಗೆಡಿಸಿದೆ. ಅದರಲ್ಲೂ ಈ ಮೊದಲೇ ತೀವ್ರ ಸಂಕಷ್ಟದಲ್ಲಿದ್ದ ರೈತರ ಬದುಕು ಹೈರಾಣಾಗಿದೆ.
ಸಾಲ ಪಡೆದು ಬೆಳೆ ಬೆಳೆದರೂ ಅಸಲು ಸಹ ಬಾರದ ಪರಿಸ್ಥಿತಿ ಇದೆ. ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಘಗಳ ಮೂಲಕ ಮಾತ್ರವಲ್ಲದೆ ಖಾಸಗಿಯವರಿಂದಲೂ ರೈತರು ಸಾಲ ಪಡೆಯುತ್ತಾರೆ. ಹೀಗೆ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದ ರೈತನೊಬ್ಬ ಅವರುಗಳ ಕಾಟ ತಾಳಲಾರದೆ ವಿಷ ಸೇವಿಸಿದ ಘಟನೆ ನಡೆದಿದೆ.
Facebook ಡೇಟಾ ಸೋರಿಕೆ: ನಿಮ್ಮ ಖಾತೆ ವಿವರ ಸೋರಿಕೆಯಾಗಿದ್ರೆ ಪರಿಶೀಲಿಸುವುದು ಹೇಗೆ….? ಇಲ್ಲಿದೆ ಮಾಹಿತಿ
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮಕ್ಕಳಗೇರಿ ಗ್ರಾಮದ ಲಕ್ಷ್ಮಣ ಈಳಗೇರಿ ವಿಷ ಸೇವಿಸಿದ ರೈತನಾಗಿದ್ದು, ಅದಕ್ಕೂ ಮುನ್ನ ಫೇಸ್ಬುಕ್ನಲ್ಲಿ ತಮ್ಮ ಸಂಕಷ್ಟ ಹೇಳಿಕೊಂಡಿದ್ದಾರೆ. ಬಳಿಕ ಕೀಟನಾಶಕ ಸೇವಿಸಿದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ರೈತ ಲಕ್ಷ್ಮಣ ಪ್ರಾಣಾಪಾಯದಿಂದ ಪಾರಾಗಿದ್ದು, ತನಗೆ ಕಿರುಕುಳ ಕೊಟ್ಟವರ ಹೆಸರನ್ನು ತಿಳಿಸಿದ್ದಾರೆ.